ಕಾಬೂಲ್: ಅಫ್ಘಾನ್ ಮಾಜಿ ಸಚಿವರೊಬ್ಬರು ಇದೀಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅವರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.
ಆಶ್ರಫ್ ಘನಿ ಸರ್ಕಾರದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಸೈಯದ್ ಅಹಮ್ಮದತ್ ಶಾ ಸಾದತ್ ಅವರೇ ಇದೀಗ ಪಿಝಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವವರಾಗಿದ್ದಾರೆ. ಅಶ್ರಫ್ ಘನಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ದೇಶವನ್ನೇ ತೊರೆದು ಜರ್ಮನಿಯಲ್ಲಿ ನೆಲೆಸಿದ್ದರು. ಈ ವೇಳೆ ಅವರಿಗೆ ತಮ್ಮ ಬದುಕು ಸಾಗಿಸಲು ಹಣದ ಕೊರತೆ ಉಂಟಾಗಿದೆ.
Advertisement
Advertisement
ಹಣದ ಅವಶ್ಯಕತೆ ಎದುರಾದ ಸಂದರ್ಭದಲ್ಲಿ ಅವರು ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡಬೇಕಾದ ಅನಿವಾರ್ಯ ಎದುರಾಯಿತು. ಹೀಗಾಗಿ ಸಾದತ್ ಅವರು ಜರ್ಮನಿಯ ಲೀಪ್ ಜಿಂಗ್ ನಲ್ಲಿ ಫುಡ್ ಡೆಲಿವರಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರ್ಪಡೆಗೊಳ್ಳುತ್ತಾರೆ. ಅಂತೆಯೇ ಇದೀಗ ನಗರದಾದ್ಯಂತ ಸೈಕಲ್‍ನಲ್ಲಿ ಓಡಾಡುತ್ತಾ ತಮ್ಮ ಗ್ರಾಹಕರಿಗೆ ಆಹಾರವನ್ನು ವಿತರಿಸುತ್ತಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.
Advertisement
Vor ein paar Tagen lernte ich einen Mann kennen, der behauptete, vor zwei Jahren afghanischer Kommunikationsminister gewesen zu sein. Ich fragte, was er in #Leipzig mache. „Ich fahre für Lieferando Essen aus.“ pic.twitter.com/nafutTTXqP
— Josa Mania-Schlegel (@JosaMania) August 21, 2021
Advertisement
ಸಾದತ್ ಅವರು ಜರ್ಮನಿಯಲ್ಲಿ ತನ್ನ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಸಂದರ್ಭ ಸ್ಥಳೀಯ ಮಾಧ್ಯಮದ ವರದಿಗಾರರು ಮಾಜಿ ಸಚಿವರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು
ಸ್ಥಳೀಯ ಮಾಧ್ಯಮ ವರದಿಗಾರ ಈಓ ಬಗ್ಗೆ ತಮ್ಮ ಟ್ವೀಟ್ ನಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡು, ಕಳೆದ ಎರಡು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಸಂವಹನ ಸಚಿವರಾಗಿದ್ದೆ ಎಂದು ಹೇಳಿಕೊಂಡ ವ್ಯಕ್ತಿಯನ್ನು ನಾನು ಕಳೆದ ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದೆ. ನಾನು ಆ ವ್ಯಕ್ತಿಯ ಬಳಿ ನೀವು ಲೀಪ್‍ಜಿಂಗ್ ಪ್ರದೇಶದಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಆಗ ಅವರು ಲೈಫೆರಾಂಡೋಗೆ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
Ich recherchierte die Story nach, las afghanische Zeitungen, sprach mit anderen Afghanen. Sie stimmte. Gestern nahm er sich zwei Stunden vor seiner Schicht Zeit, um mir zu erzählen wie es dazu kommen konnte. Der Fall des Sayed Ahmad Shah Sadaat für @LVZ ???? https://t.co/VEfH6rv1E2 pic.twitter.com/ATwnt5bWGa
— Josa Mania-Schlegel (@JosaMania) August 21, 2021
2018 ರಲ್ಲಿ ಅಶ್ರಫ್ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಇದ್ದರು. ಎರಡು ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರಾಗಿ ಸೈಯದ್ ಅಹಮ್ಮದ್ ಶಾ ಸಾದತ್ ಕಾರ್ಯ ನಿರ್ವಹಿಸಿದ್ದಾರೆ. 2020 ರಲ್ಲಿ ಸಾದತ್ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಕಳೆದ ವರ್ಷ ಅಂದರೆ 2020 ರ ಡಿಸೆಂಬರ್‍ನಲ್ಲಿ ಜರ್ಮಿನಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು
Afghan minister now delivering pizza in #Germany
▪️#Afghanistan's former communications minister Sayed Ahmad Shah Saadat is now a driver for the Lieferando delivery service in Leipzig. pic.twitter.com/4SpQPHGrZm
— EHA News (@eha_news) August 22, 2021