ಕಾಬೂಲ್: ವಾರಾಂತ್ಯದಲ್ಲಿ ಪೂರ್ವ ಅಫ್ಘಾನಿಸ್ತಾನಕ್ಕೆ (Afghanistan Earthquake) ಅಪ್ಪಳಿಸಿದ ಪ್ರಬಲ ಭೂಕಂಪದಲ್ಲಿ 2,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಗಡಿಯ ಸಮೀಪವಿರುವ ಪರ್ವತ ಕುನಾರ್ ಪ್ರಾಂತ್ಯದಲ್ಲಿ ಒಟ್ಟು 2,217 ಮಂದಿ ಮೃತಪಟ್ಟಿದ್ದಾರೆ. ಸುಮಾರು 4,000 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪಕ್ಕೆ 800 ಮಂದಿ ಸಾವು – ನೆರವಿಗೆ ನಿಂತ ಭಾರತ; 15 ಟನ್ ಆಹಾರ ಸಾಮಗ್ರಿ ರವಾನೆ
ಭಾನುವಾರ ಮಧ್ಯರಾತ್ರಿಯ ಮೊದಲು ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪಾಕಿಸ್ತಾನದ ಗಡಿಯಲ್ಲಿರುವ ಕುನಾರ್ ಪ್ರಾಂತ್ಯದಲ್ಲಿ ಅತ್ಯಂತ ಭೀಕರವಾದ ವಿನಾಶಕ್ಕೆ ಕಾರಣವಾಗಿದೆ. ನೂರಾರು ಜನರು ಹತ್ತಿರದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಅಫ್ಘಾನಿಸ್ತಾನದ ಭೂಕಂಪದ ಕೇಂದ್ರಬಿಂದು ಜಲಾಲಾಬಾದ್‌ನಿಂದ ಸುಮಾರು 27 ಕಿಲೋಮೀಟರ್ ದೂರದಲ್ಲಿತ್ತು. ಭೂಕಂಪವು ಭೂಮಿಯ ಮೇಲ್ಮೈಯಿಂದ ಎಂಟು ಕಿಲೋಮೀಟರ್ ಕೆಳಗೆ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ.