ಅಫ್ಘಾನಿಸ್ತಾನದಲ್ಲಿ ಸರಣಿ ಭೂಕಂಪ – 4,000 ಗಡಿ ದಾಟಿದ ಸಾವಿನ ಸಂಖ್ಯೆ

Public TV
1 Min Read
Afghanistan earthquake

ಕಾಬೂಲ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ (Afghanistan) ಶನಿವಾರ ಸಂಭವಿಸಿದ ಸರಣಿ ಭೂಕಂಪದಲ್ಲಿ (Earthquake) 4,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

6.2 ತೀವ್ರತೆಯ 2 ಭೂಕಂಪಗಳಲ್ಲಿ ಸುಮಾರು 2,000 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಫ್ಘಾನಿಸ್ತಾನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

Afghanistan earthquake

ಇದುವರೆಗಿನ ಸಾವುನೋವುಗಳಿಗೆ ಸಂಬಂಧಿಸಿದಂತೆ ನಾವು ಪಡೆದ ಅಂಕಿಅಂಶಗಳು ದುರದೃಷ್ಟವಶಾತ್ 4,000 ಅಧಿಕ ಜನರನ್ನು ಮೀರಿದೆ. ನಮ್ಮ ಅಂಕಿಅಂಶಗಳ ಪ್ರಕಾರ ಸುಮಾರು 20 ಹಳ್ಳಿಗಳಲ್ಲಿ, ಸರಿಸುಮಾರು 1,980 ರಿಂದ 2,000 ಮನೆಗಳು ಸಂಪೂರ್ಣವಾಗಿ ಕುಸಿದಿವೆ ಎಂದು ವಕ್ತಾರ ಮುಲ್ಲಾ ಸಾಯಿಕ್ ಕಾಬೂಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ: ಯುದ್ಧ ನಾವು ಆರಂಭಿಸಿಲ್ಲ ಆದ್ರೆ ಮುಗಿಸುತ್ತೇವೆ – ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗು

ವಿವಿಧ ಸಂಸ್ಥೆಗಳ 35 ರಕ್ಷಣಾ ತಂಡಗಳಲ್ಲಿ ಒಟ್ಟು 1,000 ಕ್ಕೂ ಹೆಚ್ಚು ರಕ್ಷಕರು ಪೀಡಿತ ಪ್ರದೇಶಗಳಲ್ಲಿ ಪರಿಹಾರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಹಂಗಾಮಿ ಪ್ರಧಾನಿ ಮೊಹಮ್ಮದ್ ಹಸನ್ ಅಖುಂಡ್ ಅವರು ಹೆರಾತ್ ಪ್ರಾಂತ್ಯದ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು.

ಚೀನಾ ಅಫ್ಘಾನ್ ರೆಡ್ ಕ್ರೆಸೆಂಟ್‌ಗೆ 200,000 ಅಮೆರಿಕನ್ ಡಾಲರ್‌ಗಳನ್ನು ತುರ್ತು ಮಾನವೀಯ ನೆರವಾಗಿ ಅದರ ರಕ್ಷಣೆ ಮತ್ತು ವಿಪತ್ತು ಪರಿಹಾರ ಪ್ರಯತ್ನಗಳಿಗೆ ಸಹಾಯ ಮಾಡಲು ಒದಗಿಸಿದೆ. ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ; 60 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಸಾವು – ಯಾವ ದೇಶದ ಎಷ್ಟು ಮಂದಿ?

ಶನಿವಾರ ಮಧ್ಯಾಹ್ನ ಹೆರಾತ್ ಪ್ರಾಂತ್ಯ ಮತ್ತು ನೆರೆಯ ಪ್ರದೇಶಗಳಲ್ಲಿ ಭೂಕಂಪಗಳು ಸಂಭವಿಸಿದವು. ಮೊದಲ ಕಂಪನವು ಸ್ಥಳೀಯ ಸಮಯ 11.10 ರ ಸುಮಾರಿಗೆ ಸಂಭವಿಸಿತು.

Web Stories

Share This Article