– ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
ಕಾಬೂಲ್: ಬಸ್ಸೊಂದು ಟ್ರಕ್ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ತಗುಲಿ 76 ಜನರು ಸಾವನ್ನಪ್ಪಿರುವ ಭೀಕರ ಘಟನೆ ಗುಜಾರಾ ಜಿಲ್ಲೆಯ ಹೆರಾತ್ ನಗರದ ಹೊರವಲಯದಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಬಸ್ಸು ಇಸ್ಲಾಂ ಖಲಾ ಪ್ರದೇಶದಿಂದ ಕಾಬೂಲ್‌ಗೆ ಇತ್ತೀಚಿಗೆ ಇರಾನ್‌ನಿಂದ ಗಡೀಪಾರು ಮಾಡಲಾಗಿದ್ದ ನಿರಾಶ್ರಿತರನ್ನು ಕರೆದೊಯ್ಯುತ್ತಿತ್ತು ಎನ್ನಲಾಗಿದೆ. ಜೊತೆಗೆ ಬಸ್ಸಿನ ಅತಿಯಾದ ವೇಗದಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಪ್ರಭಾಸ್-ಅನುಷ್ಕಾ
ಬಸ್ಸು ಟ್ರಕ್ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಪ್ರಮಾಣದ ಬೆಂಕಿ ಆವರಿಸಿಕೊಂಡಿದ್ದು, ಬಸ್‌ನಲ್ಲಿದ್ದವರು ಸೇರಿದಂತೆ ಕೆಲವರು ಸುಟ್ಟು ಕರಕಲಾಗಿದ್ದಾರೆ. ಅವಘಡದಲ್ಲಿ ಈವರೆಗೂ 17 ಮಕ್ಕಳು ಸೇರಿದಂತೆ 76 ಜನರು ಸಾವನ್ನಪ್ಪಿದ್ದಾರೆ. ಕೆಲವರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.
ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಟ್ರಕ್‌ನಲ್ಲಿದ್ದ ಇಬ್ಬರು ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಕೂಡ ಮೃತಪಟ್ಟಿದ್ದಾರೆ.ಇದನ್ನೂ ಓದಿ: ಚಹಲ್‌ಗೆ ಟಕ್ಕರ್ ಕೊಟ್ಟ ಮಾಜಿ ಪತ್ನಿ ಧನಶ್ರೀ

