ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGIA) ಕಾಬೂಲ್‌ನಿಂದ ಬಂದ ಅರಿಯಾನಾ ಅಫ್ಘಾನ್ ವಿಮಾನವು (Afghan jet) ಟೇಕಾಫ್‌ಗಾಗಿ ಮೀಸಲಿಟ್ಟ ರನ್‌ವೇಯಲ್ಲಿ (Runway) ಲ್ಯಾಂಡ್ ಆಗಿದೆ. ಈ ವೇಳೆ ಟೇಕಾಫ್ (Take off ) ಆಗುವ ಯಾವುದೇ ವೀಮಾನ ಇರದ ಕಾರಣದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸಮನ್ವಯ ದೋಷಗಳ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಕಾಬೂಲ್‌ನಿಂದ ಬಂದ FG 311 ವಿಮಾನ ಭಾನುವಾರ ಮಧ್ಯಾಹ್ನ 12:07ಕ್ಕೆ ರನ್‌ವೇ 29R ನಲ್ಲಿ ಇಳಿಯಿತು. ಅದೃಷ್ಟವಶಾತ್, ಆ ಸಮಯದಲ್ಲಿ ಯಾವುದೇ ವಿಮಾನ ಹಾರಲು ಸಿದ್ಧವಾಗಿರಲಿಲ್ಲ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದೆ. ಇದನ್ನೂ ಓದಿ: Tejas Crash | ಕೊನೆ ಕ್ಷಣದಲ್ಲಿ ಎಜೆಕ್ಟ್ ಆಗಲು ಯತ್ನಿಸಿದ್ದ ಪೈಲಟ್
ರನ್‌ವೇ 29Rನ್ನು ನಿರ್ಗಮನಕ್ಕಾಗಿ ಮತ್ತು 29Lನ್ನು ಆಗಮನಕ್ಕಾಗಿ ಗೊತ್ತುಪಡಿಸಲಾಗಿದೆ. ಗಾಳಿಯ ದಿಕ್ಕು ಸೇರಿದಂತೆ ಅವಶ್ಯಕತೆಗೆ ಅನುಗುಣವಾಗಿ ಎರಡೂ ರನ್‌ವೇಯನ್ನು ಸಾಂದರ್ಭಿಕವಾಗಿ ಪರಸ್ಪರ ಬದಲಾಯಿಸಲಾಗುತ್ತದೆ.
ಜೆಟ್ ವಿಮಾನವು ರನ್‌ವೇಯಲ್ಲಿ ತಪ್ಪಾಗಿ ಇಳಿದಿದೆಯೇ? ಅಥವಾ ವಾಯು ಸಂಚಾರ ನಿಯಂತ್ರಕರ ಸೂಚನೆಗಳ ಮೇರೆಗೆ ಲ್ಯಾಂಡ್ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: Dubai Tejas Crash| ಸಮವಸ್ತ್ರ ಧರಿಸಿ ಪತಿಗೆ ಸೆಲ್ಯೂಟ್ ಹೊಡೆದ ಪತ್ನಿ
