ಕೀವ್: ಅಫ್ಘಾನಿಸ್ತಾನದ ಯುದ್ಧವನ್ನು ತಪ್ಪಿಸಿಕೊಂಡು ಉಕ್ರೇನ್‍ಗೆ ಬಂದಿದ್ದೆ. ಆದರೆ ಇಲ್ಲಿ ಇನ್ನೊಂದು ಯುದ್ಧ ಪ್ರಾರಂಭವಾಗಿದೆ. ಇದು ನನ್ನ ದುರಾದೃಷ್ಟವಾಗಿದೆ ಎಂದು ಸಂತ್ರಸ್ತ ಅಜ್ಮಲ್ ರಹಮಾನಿ ಹೇಳಿದರು.
ಪೋಲೆಂಡ್‍ಗೆ ದಾಟಿದ ಸ್ವಲ್ಪ ಸಮಯದ ನಂತರ ಮಾತನಾಡಿದ ಅವರು, ಒಂದು ವರ್ಷದ ಹಿಂದೆ ಅಫ್ಘಾನಿಸ್ತಾನವನ್ನು ತೊರೆದು ಉಕ್ರೇನ್‍ನಲ್ಲಿ ನೆಲೆಸಿದ್ದೆವು. ಇಲ್ಲಿ ಶಾಂತಿಯಿಂದ ನೆಲೆಸಿದ್ದೆವು. ಆದರೆ ಇಲ್ಲೂ ಕಳೆದ 5 ದಿನಗಳಿಂದ ಯುದ್ಧ ಪ್ರಾರಂಭವಾಗಿದ್ದು, ನಾನು ಹಾಗೂ ನನ್ನ ಕುಟುಂಬ ಪಲಾಯನ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಳಲುತೊಡಿಕೊಂಡರು.
Advertisement
Advertisement
ಅಫ್ಘಾನಿಸ್ತಾನದಲ್ಲಿದ್ದಾಗ ನನಗೆ ಸ್ವಂತ ಮನೆ ಕಾರು ಇತ್ತು. ಕುಟುಂಬದ ಜೊತೆ ಉತ್ತಮವಾಗಿ ಜೀವನ ನಡೆಸುತ್ತಿದ್ದೆ. ಆದರೆ ಅಫ್ಘಾನಿಸ್ತಾನದಲ್ಲಿ ಯುದ್ಧ ಪ್ರಾರಂಭವಾದಾಗ ಎಲ್ಲವೂ ಬದಲಾಗಿದೆ. ನಾನು ಎಲ್ಲವನ್ನೂ ಕಳೆದುಕೊಂಡೆ. ಅಲ್ಲಿಂದ ನಾನು ನನ್ನ ಕುಟುಂಬ ಪಾರಾಗಿ ಉಕ್ರೇನ್‍ಗೆ ಬಂದೆವು. ಆದರೆ ಈಗ ಇಲ್ಲೂ ಅದೇ ಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಟೂತ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು
Advertisement
Advertisement
ರಷ್ಯಾ ದಾಳಿಗೆ ಉಕ್ರೇನ್ ತತ್ತರಿಸಿದೆ. ಉಕ್ರೇನ್‍ನಿಂದ ಜೀವ ಉಳಿಸಿಕೊಳ್ಳಲು ಜನ ಹರಸಾಹಸ ಪಡುತ್ತಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಂಕರ್‍ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇನ್ನೂ ಕೆಲವು ಜನರು ಬೇರೆ ದೇಶಗಳಿಗೆ ತಲುಪಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!