ಕಾಬೂಲ್: ಅಫ್ಘಾನಿಸ್ತಾನದ ಗುಪ್ತಚರ ಏಜೆಂಟ್ ತಂಡವು 3,000 ಲೀಟರ್ ಮದ್ಯವನ್ನು ಕಾಲುವೆಗೆ ಸುರಿದಿದೆ.
ಅಫ್ಘಾನಿಸ್ತಾನದ ಗುಪ್ತಚರ ಏಜೆಂಟ್ ತಂಡವು ಕಾಬೂಲ್‍ನ ಕಾಲುವೆಗೆ ಸುಮಾರು 3,000 ಲೀಟರ್ ಮದ್ಯವನ್ನು ಸುರಿದಿದೆ ಎಂದು ದೇಶದ ಬೇಹುಗಾರಿಕಾ ಸಂಸ್ಥೆ ಇಂದು ತಿಳಿಸಿದೆ. ಅದು ಅಲ್ಲದೇ ಈ ಕುರಿತು ತಾಲಿಬಾನ್ ಅಧಿಕಾರಿಗಳು ಮದ್ಯ ಮಾರಾಟವನ್ನು ಭೇದಿಸುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ
Advertisement
ಜನರಲ್ ಡೈರೆಕ್ಟರೇಟ್ ಆಫ್ ಇಂಟೆಲಿಜೆನ್ಸ್(ಜಿಡಿಐ) ಈ ಕುರಿತು ಮಾಹಿತಿ ನೀಡಿದ್ದು, ಕಾಬೂಲ್ ನಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿದ ನಂತರ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಮದ್ಯವನ್ನು ವಶಪಡಿಸಿಕೊಂಡ ಏಜೆಂಟ್ ಗಳು ಅದನ್ನು ಕಾಲುವೆಗೆ ಸುರಿದಿದ್ದಾರೆ.
Advertisement
Advertisement
ಗುಪ್ತಚರ ಅಧಿಕಾರಿಯೊಬ್ಬರು ಇಂದು ಟ್ವಿಟರ್‌ನಲ್ಲಿ, ಮುಸ್ಲಿಮರು ಮದ್ಯ ತಯಾರಿಕೆ ಮತ್ತು ವಿತರಣೆಯಿಂದ ಗಂಭೀರವಾಗಿ ದೂರವಿರಬೇಕು ಎಂದು ಬರೆದು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
Advertisement
Afghan intelligence agents, General Directorate of Intelligence (GDI) spilled around 3,000 litres of liquor into a canal in Kabul on Sunday, as the new Taliban authorities launch campaign against sale of alcohol#Afghanistan#AfghanTaliban#generaldirectorateofintelligence pic.twitter.com/8RtaDCH6zD
— Asia Free Press (AFP) (@AsiaFreePress) January 2, 2022
ಈ ದಾಳಿ ಕುರಿತು ಅಧಿಕಾರಿಗಳು ಯಾವುದೇ ನಿಖರ ಮಾಹಿತಿಯನ್ನು ನೀಡಿಲ್ಲ. ಆದರೆ ಕಾರ್ಯಾಚರಣೆಯ ಸಮಯದಲ್ಲಿ ಮದ್ಯವನ್ನ ವಿತರಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಹಿಂದಿನ ಪಾಶ್ಚಿಮಾತ್ಯ-ಬೆಂಬಲಿತ ಆಡಳಿತದಲ್ಲಿಯೂ ಸಹ ಮದ್ಯವನ್ನು ಮಾರಾಟ ಮಾಡುವುದು ಮತ್ತು ಸೇವಿಸುವುದನ್ನು ನಿಷೇಧಿಸಲಾಗಿತ್ತು. ಆದರಲ್ಲೂ ಇಸ್ಲಾಂನ ಕಠಿಣ ಬ್ರಾಂಡ್‍ಗೆ ಹೆಸರುವಾಸಿಯಾದ ತಾಲಿಬಾನ್, ಅದರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ. ಇದನ್ನೂ ಓದಿ: ಅಷ್ಟಮಠದ ನಾಲ್ವರು ಸ್ವಾಮೀಜಿಗಳಿಂದ ಎಳ್ಳಮಾವಾಸ್ಯೆ ಸಮುದ್ರಸ್ನಾನ – ಭಕ್ತರು ಪುಳಕ
I just poured the lean in my cup like it’s liquor
— TALIBAN ???????? (@FrassMarley) January 2, 2022
ಆಗಸ್ಟ್ 15 ರಂದು ಇಸ್ಲಾಮಿಸ್ಟ್ ಗಳು ಅಧಿಕಾರವನ್ನು ವಶಪಡಿಸಿಕೊಂಡ ನಂತರ, ಮಾದಕ ವ್ಯಸನಿಗಳು ಸೇರಿದಂತೆ ದೇಶಾದ್ಯಂತ ದಾಳಿಗಳು ಸಹ ಅಷ್ಟೇ ಹೆಚ್ಚಾಗಿದೆ.
.