ಕಾಬೂಲ್: ಅಘ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ತಾಲಿಬಾನ್ ದಮನಕಾಂಡ ನಿಲ್ಲುತ್ತಿಲ್ಲ. ಈಗಾಗಲೇ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಿರುವ ತಾಲಿಬಾನ್ ಉಗ್ರರು, ಕಳೆದ ಸರ್ಕಾರದಲ್ಲಿದ್ದ ಮಹಿಳಾ ಸಚಿವಾಲಯದ ಕಟ್ಟಡಕ್ಕೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ಧ್ವಂಸ ಮಾಡಿದ್ದಾರೆ.
Advertisement
ತಾಲಿಬಾನಿಗಳು ಮಹಿಳಾ ಸಚಿವಾಲಯಕ್ಕೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಹೊರಹಾಕಿದ್ದಾರೆ. ತಾಲಿಬಾನ್ ಸರ್ಕಾರ ಹೊಸದಾಗಿ ರಚಿಸಿದ್ದ ಧರ್ಮಪ್ರಚಾರ ಇಲಾಖೆಯ ಕೆಲಸವನ್ನು ಅಲ್ಲಿ ಶುರು ಮಾಡಿದ್ದಾರೆ. ಷರಿಯಾ ಜಾರಿ ಈ ಇಲಾಖೆಯ ಜವಾಬ್ದಾರಿಯಾಗಿದೆ ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ದೇಶದ ಮಹಿಳಾ ಸಚಿವಾಲಯವನ್ನು ತಾಲಿಬಾನ್‍ನ ನೈತಿಕ ಪೊಲೀಸ್ ಗಿರಿಗೆ ಬದಲಿಸುವುದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಅಲ್ಲದೆ ಇಲಾಖೆಯ ಮಹಿಳಾ ಉದ್ಯೋಗಿಗಳನ್ನು ಕಟ್ಟಡದಿಂದ ಹೊರಗೆ ಹಾಕಲಾಗಿದೆ. ಮಹಿಳಾ ಸಚಿವಾಲಯವನ್ನು ಪ್ರಾರ್ಥನೆ, ಮಾರ್ಗದರ್ಶನ ಹಾಗೂ ಸದ್ಗುಣಗಳ ಪ್ರಚಾರ, ದುರಾಚಾರ ತಡೆ ಸಚಿವಾಲಯ ಎಂದು ಬದಲಿಸಲಾಗಿದೆ. ಇದನ್ನೂ ಓದಿ: ಮಹಿಳಾ ಸಚಿವಾಲಯವನ್ನೇ ತೆಗೆದ ತಾಲಿಬಾನ್ ಸರ್ಕಾರ
Advertisement
Advertisement
ಈ ಮಧ್ಯೆ, ಕಾಬೂಲ್ ಏರ್ ಪೋರ್ಟ್ ಮೇಲೆ ಆತ್ಮಾಹುತಿ ದಾಳಿ ನಡೆಸಿದ ಲೋಗ್ರಿಯನ್ನು ದೆಹಲಿಯಲ್ಲಿ ಐದು ವರ್ಷಗಳ ಹಿಂದೆ ಬಂಧಿಸಿ, ಅಫ್ಘನ್ ವಶಕ್ಕೆ ಒಪ್ಪಿಸಿತ್ತು ಎಂಬ ವಿಚಾರ ಬಯಲಾಗಿದೆ. ಶ್ರೀಮಂತ ವರ್ತಕನ ಮಗನಾಗಿದ್ದ ಲೋಗ್ರಿ, ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ತಾಲಿಬಾನ್ ಸರ್ಕಾರ ವಿರುದ್ಧ ಸಿಡಿದ ಅಫ್ಘಾನ್ ಮಹಿಳೆಯರು
Advertisement