– 70 ಯುದ್ಧ ವಿಮಾನ, 100ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ
– ಏರ್‌ಪೋರ್ಟ್ ಸುತ್ತಮುತ್ತ ಹಲವು ರಸ್ತೆಗಳ ಸಂಚಾರದಲ್ಲಿ ಮಾರ್ಪಾಡು
ಬೆಂಗಳೂರು: ನೋಡುಗರ ಹೃದಯ ಬಡಿತ ಹೆಚ್ಚಿಸುವ ವೈಮಾನಿಕ ಕಸರತ್ತು, ವೈಮಾನಿಕ ಹಾಗೂ ಬಾಹ್ಯಾಕಾಶ ಉದ್ದಿಮೆ, ಉದ್ಯಮಿಗಳ ಮುಖಾಮುಖಿಗೆ ವೇದಿಕೆಯಾಗಲಿರುವ ದೇಶದ 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼ (Aero India 2025) ಸೋಮವಾರ ಶುರುವಾಗಲಿದೆ.
Advertisement
ಯಲಹಂಕ ವಾಯುನೆಲೆಯಲ್ಲಿ (Yelahanka Air Base) ಇಂದು ಬೆಳಗ್ಗೆ 9:30ರ ವೇಳೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ದೇಶ – ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಏರ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ಇಂದಿನಿಂದ ಫೆಬ್ರವರಿ 14ರ ವರೆಗೆ ನಡೆಯಲಿರುವ ಏರ್ ಶೋನಲ್ಲಿ ಅಮೆರಿಕ, ರಷ್ಯನ್ ಸೇರಿದಂತೆ ವಿವಿಧ ದೇಶಗಳ ಯುದ್ಧ ವಿಮಾನಗಳು ಭಾಗಿಯಾಗಲಿವೆ. ಇದನ್ನೂ ಓದಿ: IND vs ENG, 2nd ODI: ರೋಹಿತ್ ಅಬ್ಬರದ ಶತಕ, ಜಡೇಜಾ ಸ್ಪಿನ್ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ
Advertisement
Advertisement
ಈ ಬಾರಿ ʻರನ್ ವೇ ಟು ಬಿಲಿಯನ್ ಆಪರ್ಚುನಿಟಿ ಟ್ಯಾಗ್ ಲೈನ್ʼನಲ್ಲಿ ಏರ್ ಶೋ ಜರುಗಲಿದೆ. 100ಕ್ಕೂ ಹೆಚ್ಚು ದೇಶಗಳ, 900ಕ್ಕೂ ಹೆಚ್ಚು ಉತ್ಪಾದಕರು ಭಾಗಿಯಾಗುತ್ತಿದ್ದು, ಎಐ, ಡ್ರೋನ್, ಗ್ಲೋಬಲ್ ಏರೋ ಸ್ಪೇಸ್, ಸೇರಿದಂತೆ ನೂತನ ತಂತ್ರಜ್ಞಾನದ ವಿವಿಧ ವಸ್ತುಪ್ರದರ್ಶನಗಳನ್ನ ಕಣ್ತುಂಬಿಕೊಳ್ಳುವ ಅವಕಾಶ ಇರಲಿದೆ. ಕೊನೆಯ ಎರಡು ದಿನ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ.
Advertisement
ಈ ಬಾರಿಯ ವಿಶೇಷತೆ ಏನು?
ಈ ಬಾರಿ 42,438 ವಿಸ್ತೀರ್ಣದಲ್ಲಿ ಏರ್ ಶೋ ನಡೆಯುತ್ತಿದ್ದು, ವಿವಿಧ 30 ದೇಶಗಳ ರಕ್ಷಣಾ ಸಚಿವರು, ವಿವಿಧ ದೇಶಗಳ 43 ಮಂದಿ ಸೇನಾ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಒಟ್ಟಾರೆ 90 ದೇಶಗಳು ಏರೋ ಇಂಡಿಯಾದವನ್ನು ಪ್ರತಿನಿಧಿಸಲಿವೆ. 70 ಯುದ್ಧ ವಿಮಾನಗಳು, ಸರಕು, ತರಬೇತಿ ವಿಮಾನಗಳು, 30 ವಿಮಾನಗಳು, ಹೆಲಿಕಾಫ್ಟರ್ ಹೃದಯ ಬಡಿತ ಹೆಚ್ಚಿಸುವ ಕಸರತ್ತು ನಡೆಸಲಿವೆ. ರಷ್ಯನ್ & ಅಮೆರಿಕನ್ ಯುದ್ಧ ವಿಮಾನಗಳು ಈ ಪ್ರದರ್ಶನದ ಆಕರ್ಷಣೆಯಾಗಿವೆ. ಇದನ್ನೂ ಓದಿ: ಫೆ.11ರಂದು ‘ಇನ್ವೆಸ್ಟ್ ಕರ್ನಾಟಕ 2025’ಕ್ಕೆ ಚಾಲನೆ – ಹೂಡಿಕೆ ಉತ್ಸವಕ್ಕೆ ಮುನ್ನುಡಿ: ಎಂ.ಬಿ.ಪಾಟೀಲ್
ಅಲ್ಲದೇ ವಿವಿಧ ದೇಶಗಳ 900ಕ್ಕೂ ಹೆಚ್ಚು ಉತ್ಪಾದಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಎಐ, ಡ್ರೋನ್, ಸೈಬರ್ ಸೆಕ್ಯೂರಿಟಿ, ಗ್ಲೋಬರ್ ಏರೋಸ್ಪೇಸ್, ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಿದ್ದಾರೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಈ ಬಾರಿಯ ಶೋನಲ್ಲಿ ಇರಲಿವೆ. 100 ವಿವಿಧ ಕಂಪನಿಗಳ ಸಿಇಒಗಳು, 50 ವಿದೇಶಿ ಓಎಂಎಸ್ ಭಾಗಿಯಾಗಲಿದ್ದಾರೆ. ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯದ ಬಗ್ಗೆ ಚರ್ಚೆ ನಡೆಯಲಿದೆ. 10 ವಿವಿಧ ವಿಷಯಗಳನ್ನ ಒಳಗೊಂಡ ಸೆಮಿನಾರ್‌ಗಳು ಇರಲಿದೆ. 70ಕ್ಕೂ ಹೆಚ್ಚು ಫ್ಲೈಯಿಂಗ್ ಡಿಸ್‌ಪ್ಲೇಗಳು ಏರ್ ಶೋನಲ್ಲಿ ಇರಲಿವೆ. 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
ಏರ್‌ಪೋರ್ಟ್ ರಸ್ತೆಯ ಸವಾರರಿಗೆ ಟ್ರಾಫಿಕ್ ಬಿಸಿ:
ಇನ್ನೂ ಇಂದಿನಿಂದ ಏರ್ ಶೋ ಆರಂಭ ಹಿನ್ನೆಲೆ 5 ದಿನಗಳ ಕಾಲ ಏರ್‌ಪೋರ್ಟ್ ರಸ್ತೆಯ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ. ವಿದೇಶಿ ಗಣ್ಯರು ಆಗಮಿಸುವ ಕಾರಣ ಎಲಿವೇಟೆಡ್ ರಸ್ತೆಯ ಓಡಾಟವನ್ನ ಕೆಲ ಕಾಲ ಬಂದ್ ಮಾಡಲಾಗುತ್ತೆ. ಸರ್ವೀಸ್ ರಸ್ತೆಯಲ್ಲೇ ಸಂಚಾರ ಮಾಡಬೇಕಿರೋ ಕಾರಣ ಆ ಭಾಗದ ವಾಹನ ಸವಾರರು 5 ದಿನಗಳ ಕಾಲ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇನ್ನೂ, ಏರ್ ಪೋರ್ಟ್ ರಸ್ತೆ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಿ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. ಇದನ್ನೂ ಓದಿ: Hassan | ಮದುವೆಯಾಗಲು ಪ್ರಿಯತಮೆ ನಿರಾಕರಣೆ – ವಿಷ ಸೇವಿಸಿ ಯುವಕ ಆತ್ಮಹತ್ಯೆ
ಯಾವೆಲ್ಲ ವಾಹನಗಳಿಗೆ ಸಂಚಾರ ನಿಷೇಧ
* ಲಾರಿ, ಟ್ರಕ್, ಬಸ್, ಸರಕು ಸಾಗಾಣಿಕೆ ವಾಹನಗಳಿಗೆ ಸಂಚಾರ ನಿರ್ಬಂಧ
* ಮೇಖ್ರಿ ವೃತ್ತದಿಂದ-ಎಂವಿಐಟಿ ಕ್ರಾಸ್‌ವರೆಗೆ ಸಂಚಾರ ನಿಷೇಧ
* ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ವರೆಗೆ ನಿಷೇಧ
* ನಾಗವಾರ ಜಂಕ್ಷನ್‌ನಿಂದ ರೇವಾ ಕಾಲೇಜ್ ಜಂಕ್ಷನ್‌ವರೆಗೆ ಸಂಚಾರ ನಿಷೇಧ
* ಹೆಸರಘಟ್ಟ, ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ನಿಷೇಧ
* ಜಿಕೆವಿಕೆ ಕ್ಯಾಂಪಸ್‌ನಲ್ಲಿ ಸಾರ್ವಜನಿಕರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ