ಬೆಂಗಳೂರು: ಫೆಬ್ರವರಿ 13 ರಿಂದ 17ರ ವರೆಗೆ ಏರೋ ಇಂಡಿಯಾ-2023 (Aero India 2023) ವೈಮಾನಿಕ ಪ್ರದರ್ಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಸೇವೆ ಕಲ್ಪಿಸಲು ಆರೋಗ್ಯ ಇಲಾಖೆ (Health Department) 30 ವೈದ್ಯಕೀಯ ತಂಡಗಳನ್ನ (Medical Team) ನಿಯೋಜನೆ ಮಾಡಿದೆ.
ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆ
Advertisement
Advertisement
ಏನೇನು ಸಿದ್ಧತೆ?
ವೈಮಾನಿಕ ಪ್ರದರ್ಶನದ ದಿನಗಳಲ್ಲಿ 30 ತುರ್ತು ಆರೋಗ್ಯ ವಿಪತ್ತು ನಿರ್ವಹಣಾ ತಂಡಗಳನ್ನ ನಿಯೋಜನೆ ಮಾಡಲಾಗಿದೆ. ಪ್ರತಿ ತಂಡದಲ್ಲಿ ಒಬ್ಬ ತಜ್ಞ ವೈದ್ಯರು (Doctors), ಶುಶ್ರೂಷಕಿ, ಫಾರ್ಮಾಸಿಸ್ಟ್ ಮತ್ತು ಸಹಾಯಕ ಸಿಬ್ಬಂದಿ ಅಂಬುಲೆನ್ಸ್ (Ambulance) ವಾಹನದೊಂದಿಗೆ ಇರುತ್ತಾರೆ. ಇದನ್ನೂ ಓದಿ: ಸಚಿವರಿಗೆ ತುರಿಕೆ ಪುಡಿ ಎರಚಿದ ಅನಾಮಿಕ – ಸಭೆಯಲ್ಲೇ ಕುರ್ತಾ ತೆಗೆದು ಕೈ ತೊಳೆದುಕೊಂಡ ಸಚಿವ
Advertisement
Advertisement
ಒಳಾಂಗಣದಲ್ಲಿ 10 ತಂಡಗಳು ಹಾಗೂ ಹೊರಾಂಗಣದಲ್ಲಿ 20 ತಂಡಗಳ ನಿಯೋಜನೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿಯ 45 ಅಂಬುಲೆನ್ಸ್ (Ambulance) ವಾಹನಗಳ ಬಳಕೆ ಮಾಡಲಾಗುತ್ತಿದೆ. 70 ವೈದ್ಯರು, 80 ಅರೆ ವೈದ್ಯಕೀಯ ಸಿಬ್ಬಂದಿ ಮತ್ತು 27 ಸಹಾಯಕ ಸಿಬ್ಬಂದಿಯೂ ಈ ತಂಡದಲ್ಲಿ ಇರಲಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್
ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳು (Private Hospital) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಕೈ ಜೋಡಿಸಿವೆ. ಖಾಸಗಿ ಆಸ್ಪತ್ರೆಗಳಲ್ಲಿ 1,928 ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 750 ಹಾಸಿಗೆಗಳನ್ನ ಕಾಯ್ದಿರಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಅಧಿಕಾರಿಗಳೂ ಈ ತಂಡದಲ್ಲಿದ್ದು, ಈಗಾಗಲೇ ಅಣುಕು ಪ್ರದರ್ಶನ ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k