ಬೆಂಗಳೂರು: ಏರ್ ಶೋ (Air Show) ಅಂದ್ರೆ ಅದರ ಮಜಾನೇ ಬೇರೆ. ಮುಗಿಲೆತ್ತರಕ್ಕೆ ಹಾರಿ ಬಗೆ ಬಗೆಯ ಸ್ಟಂಟ್ ಮಾಡೋ ಜೆಟ್ಗಳ (Jets) ಹಾರಾಟ ನೋಡೋದೆ ಒಂಥರಾ ಖುಷಿ. ಇಷ್ಟು ದಿನ ಬರೀ ಗೆಸ್ಟ್ಗಳಿಗೆ ಸೀಮಿತವಾಗಿದ್ದ ಏರ್ ಶೋನಲ್ಲಿ ನಾಲ್ಕನೇ ದಿನವಾದ ಗುರುವಾರ ಸಾಮಾನ್ಯ ಜನರು ಸಹ ಸಖತ್ ಎಂಜಾಯ್ ಮಾಡಿದ್ದಾರೆ.
Advertisement
ಏರೋ ಇಂಡಿಯಾ 2023 (Aero India 2023) ಶುಕ್ರವಾರ ಅಂತಿಮ ದಿನಕ್ಕೆ ಕಾಲಿಟ್ಟಿದ್ದು, ಜನಸಾಮಾನ್ಯರಿಗೆ ಕಣ್ತುಂಬಿಕೊಳ್ಳಲು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಧಾವಿಸುವ ನಿರೀಕ್ಷೆಯಿದೆ. ಏರೋ ಇಂಡಿಯಾ ಪ್ರದರ್ಶನ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದ ಲಕ್ಷಾಂತರ ಜನರು ಶುಕ್ರವಾರ (ಫೆ.17) ಬೆಳ್ಳಂಬೆಳಗ್ಗೆ ಯಲಹಂಕ ವಾಯುನೆಲೆಯತ್ತ ಬರಲು ಶುರು ಮಾಡಿದ್ದಾರೆ. ಇದನ್ನೂ ಓದಿ: ಯುದ್ಧ ವಿಮಾನದ ಹಿಂದಿದ್ದ ಹನುಮಂತನ ಚಿತ್ರ ತೆಗೆದ ಹೆಚ್ಎಎಲ್
Advertisement
Advertisement
ಜನಸಾಮಾನ್ಯರು ಹಾಗೂ ಪಾಸ್ ಹೋಲ್ಡರ್ಗಳಿಗಾಗಿಯೇ 2 ವೈಮಾನಿಕ ಪ್ರದರ್ಶನಗಳ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 9.30ರಿಂದ 11ರ ವರೆಗೆ ಒಂದು ಪ್ರದರ್ಶನ, ಮಧ್ಯಾಹ್ನ 2 ರಿಂದ 3.30ರ ವರೆಗೆ ಮತ್ತೊಂದು ವೈಮಾನಿಕ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: Aero India-2023 ಏರ್ಶೋಗೆ ಪ್ರಧಾನಿ ಮೋದಿ ಅದ್ಧೂರಿ ಚಾಲನೆ
Advertisement
ಸಾರಂಗ್, ಸೂರ್ಯಕಿರಣ್ ಚಮತ್ಕಾರ: ಗುರುವಾರ ಏರ್ ಶೋಗೆ ಬಂದ ಜನರು ಯುದ್ಧ ವಿಮಾನಗಳ ಹಾರಾಟ ಕಂಡು ಖುಷ್ ಆಗಿದ್ರು. ಜೆಟ್ಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಜನರು, ಆಗಸದಲ್ಲಿ ಲೋಹದ ಹಕ್ಕಿಗಳ ನೋಡಿ ಖುಷಿ ಪಟ್ರು. ಸೂರ್ಯ ಕಿರಣ್, ಸಾರಂಗ್, ರಫೆಲ್ಗಳ ಸ್ಟಂಟ್ ಜನರನ್ನ ಮಂತ್ರಮುಗ್ಧವಾಗಿಸಿತ್ತು.
ಏರ್ ಶೋನಲ್ಲಿರೋ ಸ್ಟಾಲ್ಗಳಿಗೂ ಜನರು ಭೇಟಿ ನೀಡಿ ಅಲ್ಲಿನ ಸಾಧನಗಳನ್ನ ಕಣ್ತುಂಬಿಕೊಂಡರು. ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯಲ್ಲಿ ಎತ್ತ ನೋಡಿದ್ರೂ ಜನಸಾಗರವೇ ತುಂಬಿ ತುಳುಕುತ್ತಿತ್ತು. ಕೊನೆಯ ದಿನವಾದ ಶುಕ್ರವಾರವೂ ಎರಡು ಏರ್ ಶೋಗಳನ್ನ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರ ವೀಕ್ಷಣೆಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೂ ವ್ಯವಸ್ಥೆ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k