– ನನಗೆ 100 ಕೋಟಿ ಆಫರ್ ಕೊಟ್ಟು, 5 ಕೋಟಿ ಅಡ್ವಾನ್ಸ್ ನೀಡಿದ್ದರು
– ಕುಮಾರಸ್ವಾಮಿ ಪೆನ್‌ಡ್ರೈವ್ ಹಂಚಿದ್ರು ಅಂತಾ ಹೇಳುವಂತೆ ಡಿಕೆಶಿ ಹೇಳಿದ್ದರು
ಹಾಸನ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ವಕೀಲ ದೇವರಾಜೇಗೌಡ (Devarajegowda) ಹೊಸ ಬಾಂಬ್ ಸಿಡಿಸಿದ್ದಾರೆ. ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ (D.K.Shivakumar) ಅವರು ನನ್ನನ್ನು ಕರೆಸಿ ಮಾತನಾಡಿದ್ದರು. ನೀನು ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಹೇಳು. ಪೆನ್‌ಡ್ರೈವ್‌ನ ಕುಮಾರಸ್ವಾಮಿ ಹಂಚಿದ್ರು ಅಂತಾ ಹೇಳು. ನಿನಗೆ ಸಮಸ್ಯೆ ಆಗಲ್ಲ. ಸೆಕ್ಯೂರ್ ಮಾಡ್ತಿನಿ ಅಂತಾ ಭರವಸೆ ನೀಡಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ. ಇದನ್ನೂ ಓದಿ: ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ
ದೊಡ್ಡಮಟ್ಟದ ಹಣದ ಆಫರ್ ಕೊಟ್ಟರು. ಕಾರ್ತಿಕ್ ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್. ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದ್ರು. ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ಇನ್ನೊಬ್ಬ ಸಚಿವರು. ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ರು ಎಂದು ದೂರಿದ್ದಾರೆ.
ನಾನು ಒಪ್ಪದೇ ಇದ್ದಾಗ, ಈಗಾಗಲೇ ದೊಡ್ಡ ಹಗರಣ ಆಗಿರುವುದರಿಂದ ಮೋದಿಗೆ, ಬಿಜೆಪಿಗೆ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಮಾಡಿದ್ರು. ನನಗೆ ಸುಮಾರು ನೂರು ಕೋಟಿ ಆಫರ್ ಕೊಟ್ರು. ಐದು ಕೋಟಿ ರೂಪಾಯಿ ಅಡ್ವಾನ್ಸ್ ದುಡ್ಡನ್ನ ಬೌರಿಂಗ್ ಕ್ಲಬ್‌ನ 110 ರೂಂಗೆ ಕಳಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೋಮವಾರದವರೆಗೆ ರೇವಣ್ಣಗೆ ಮಧ್ಯಂತರ ಜಾಮೀನು ಮುಂದುವರಿಕೆ
ಚನ್ನರಾಯಪಟ್ಟಣ ಗೋಪಾಲಸ್ವಾಮಿ ಅವರನ್ನು ಸಂಧಾನಕ್ಕೆ ಕಳುಹಿಸಿದ್ದರು. ಐದು ಕೋಟಿ ಕ್ಯಾಶ್ ಕೊಟ್ಟು ಡಿಕೆಶಿ ಕಳಿಸಿದ್ದರು. ದೇಶದಲ್ಲಿ ಮೋದಿಯವರಿಗೆ ಕಳಂಕ ತರಬೇಕು. ಈ ರಾಸಲೀಲೆ ಹಗರಣದಲ್ಲಿ ಮೋದಿಯವರನ್ನು ಬಿಂಬಿಸಿ ಬಿಜೆಪಿಗೆ ಕೆಟ್ಟ ಹೆಸರು ತರಬೇಕು ಅಂತಾ ಮಾಡಿದರು. ಡಿ.ಕೆ.ಶಿವಕುಮಾರ್ ಮುಖ್ಯ ಉದ್ದೇಶ ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವವನ್ನು ರಾಜ್ಯದಲ್ಲಿ ಹಾಳು ಮಾಡಬೇಕು ಎನ್ನುವುದು. ಇದು ಸತ್ಯ ಎಂದು ದೇವರಾಜೇಗೌಡ ಆರೋಪ ಮಾಡಿದ್ದಾರೆ.