Connect with us

Districts

ಬದುಕು, ಜೀವನದ ಬಗ್ಗೆ ಶ್ರೀಗಳು ಆತಂಕ ವ್ಯಕ್ತಪಡಿಸಿದ್ದರು- ಸ್ವಾಮೀಜಿ ಪರ ನ್ಯಾಯವಾದಿ

Published

on

ಉಡುಪಿ: ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿಯವರು ಅವರ ಬದುಕಿನ ಹಾಗೂ ಜೀವನದ ಬಗ್ಗೆ ಬಹಳ ಆತಂಕ ವ್ಯಕ್ತಪಡಿಸುತ್ತಿದ್ದರು. ತನಗೆ ಏನೂ ಕೂಡ ಆಗಬಹುದೆಂಬ ಶಂಕೆ ಕೂಡ ಈ ಹಿಂದೆ ವ್ಯಕ್ತಪಡಿಸಿದ್ದರು ಅಂತ ಸ್ವಾಮೀಜಿ ಪರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಟ್ಟದ ದೇವರಾದ ವಿಠಲ ಮತ್ತು ಇನ್ನಿತರ ಮೂರ್ತಿಗಳನ್ನು ಅವರು ಅನಾರೋಗ್ಯದಲ್ಲಿದ್ದ ಸಂದರ್ಭದಲ್ಲಿ ಕೃಷ್ಣ ಮಠದಲ್ಲಿ ಇಟ್ಟಿದ್ದರು. ಅದನ್ನು ವಾಪಸ್ ಪಡೆಯುವ ಬಗ್ಗೆ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಸ್ವಾಮೀಜಿಯವರು ಬಯಸಿದ್ದರು. ಅದರಂತೆ ನಾನು ಬುಧವಾರ(ನಿನ್ನೆ) ದಾಖಲು ಮಾಡಬೇಕೆನ್ನುವ ಉದ್ದೇಶದಿಂದ ಫಿರ್ಯಾದಿಯನ್ನು ಕೂಡ ತಯಾರು ಮಾಡಿಟ್ಟಿದ್ದೆ. ಆದ್ರೆ ದುರಾದೃಷ್ಟವಶಾತ್ ಬರಸಿಡಿಲಿನಂತೆ ಸ್ವಾಮೀಜಿಯವರ ನಿಧನದ ಸುದ್ದಿ ಬಂದಿದೆ ಅಂತ ಅವರು ವಿಷಾದ ವ್ಯಕ್ತಪಡಿಸಿದ್ರು. ಇದನ್ನೂ ಓದಿ:  ಪಟ್ಟದ ದೇವರನ್ನು ಕೊಡದಿದ್ದರೆ ಕ್ರಿಮಿನಲ್ ಕೇಸ್ ಹಾಕ್ತೀನಿ- ಶಿರೂರು ಶ್ರೀ

ಪಟ್ಟದ ದೇವರ ವಿಚಾರವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸ್ವಾಮೀಜಿಯವರು ಬದುಕಿನ ಹಾಗೂ ಜೀವನದ ಬಗ್ಗೆ ಬಹಳ ಆತಂಕಗೊಂಡಿದ್ದರು. ಅಲ್ಲದೇ ತನಗೆ ಯಾವ ಸಂದರ್ಭದಲ್ಲೂ ಏನೂ ಕೂಡ ಆಗಬಹುದೆಂಬ ಶಂಕೆ ಕೂಡ ವ್ಯಕ್ತಪಡಿಸಿದ್ದರು ಅಂತ ಅವರು ಹೇಳಿದ್ರು. ಇದನ್ನೂ ಓದಿ: ಅಷ್ಟಮಠಗಳ ಶ್ರೀಗಳ ವಿರುದ್ಧ ಕೇವಿಯಟ್ ತಂದ ಶೀರೂರು ಶ್ರೀ

ಶ್ರೀಗಳ ಸಾವಿನ ಬಗ್ಗೆ ತನಿಖೆಯಾಗಬೇಕು. ಸಾವಿನ ಸರಿಯಾದ ಕಾರಣ ತಿಳಿದುಕೊಳ್ಳಬೇಕು. ಯಾಕಂದ್ರೆ ಸಂದೇಹ ಇರುವುದು ಒಳ್ಳೆಯದಲ್ಲ. ಹೀಗಾಗಿ ಈ ಸಂದೇಹವನ್ನು ದೂರ ಮಾಡಿಕೊಳ್ಳಲು ನಮಗೆ ವೈಜ್ಞಾನಿಕವಾಗಿ ತನಿಖೆ ನಡೆಯಬೇಕು. ವೈದ್ಯರಿಂದ ಕೂಡ ಅದರ ಬಗ್ಗೆ ಸಮರ್ಪಕವಾದ ಮಾಹಿತಿ ಪಡೆದುಕೊಳ್ಳಬೇಕು. ಆ ಸಂದರ್ಭದಲ್ಲಿ ಮಾತ್ರ ಸ್ವಾಮೀಜಿಯವರ ಹೋರಾಟಕ್ಕೆ ಅರ್ಥ, ಬೆಲೆ ಅಥವಾ ಮೌಲ್ಯ ದೊರೆಯುತ್ತದೆ ಎಂದು ಅವರು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ರು. ಇದನ್ನೂ ಓದಿ: ಶಿರೂರು ಶ್ರಿಗಳ ದೇಹದಲ್ಲಿ ವಿಷಕಾರಕ ಅಂಶ ಪತ್ತೆ- ಸಮಗ್ರ ತನಿಖೆಗೆ ಕೇಮಾರು ಶ್ರೀ ಆಗ್ರಹ

ಲಕ್ಷ್ಮೀವರ ಸ್ವಾಮೀಜಿಯವರು ಜೂನ್ 18ರಂದು ನಮ್ಮ ಕಚೇರಿಗೆ ಬಂದಿದ್ದರು. ಈ ವೇಳೆ ಸ್ವಾಮೀಜಿಗಳು ಮಠಾಧಿಪತಿಗಳೊಂದಿಗೆ ಇರುವ ಭಿನ್ನಾಭಿಪ್ರಾಯಗಳನ್ನು ವಿಸ್ತೃತವಾಗಿ ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಸ್ವಾಮೀಜಿಯವರು ಬಯಸಿದಂತೆ ಉಡುಪಿಯ ಕೃಷ್ಣ ಮಠದ ಆರು ಮಠಾಧಿಪತಿಗಳ ವಿರುದ್ಧ ನಾವು ಕೆವಿಯೆಟ್ ತಂದಿದ್ದೇವೆ. ಪುತ್ತಿಗೆ ಮಠದ ಸ್ವಾಮೀಜಿಯನ್ನು ಹೊರತುಪಡಿಸಿ ಇನ್ನಿತರ ಎಲ್ಲಾ ಮಠದ ಸ್ವಾಮೀಜಿಗಳ ಮೇಲೆ ಉಡುಪಿಯ ಸಿವಿಲ್ ಜಡ್ಜ್ ನಲ್ಲಿ ದಾಖಲು ಮಾಡಲಾಗಿತ್ತು ಅಂದ್ರು. ಇದನ್ನೂ ಓದಿ:  ಶಿರೂರು ಶ್ರೀಗಳಿಗೆ ವಿಷ ಪ್ರಾಶನ: ವೈದ್ಯರ ಶಂಕೆ

ಕೇವಿಯಟ್ ಎಂದರೇನು?
ನಮ್ಮ ಅಹವಾಲನ್ನು ಕೇಳದೇ ಯಾವುದೇ ಆದೇಶ ನೀಡಬೇಡಿ ಎಂದು ಕೋರ್ಟ್‍ಗೆ ಮನವಿ ಮಾಡುವುದನ್ನು ಕೇವಿಯಟ್ ಎನ್ನಲಾಗುತ್ತದೆ. ಒಂದು ವಿಚಾರದಲ್ಲಿ ಬೇರೊಬ್ಬರು ಅರ್ಜಿ ಸಲ್ಲಿಸಿದಾಕ್ಷಣ, ಅವರ ವಾದ ಕೇಳಿ ಯಾವ ಆದೇಶವನ್ನೂ ನೀಡಬಾರದು. ಅಲ್ಲದೇ ನಮ್ಮ ವಾದಕ್ಕೂ ಮನ್ನಣೆ ನೀಡಬೇಕು. ಆ ಬಳಿಕವಷ್ಟೇ ಆದೇಶ ಹೊರಡಿಸಿ ಎಂದು ಕೇಳಿಕೊಳ್ಳುವುದೇ ಕೇವಿಯಟ್ ಆಗಿದೆ.

Click to comment

Leave a Reply

Your email address will not be published. Required fields are marked *