ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಂತೆಯೇ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಮತ್ತು ಹಾಲಿ ಜೆಡಿಎಸ್ ಶಾಸಕ ಎ ಮಂಜು (A Manju) ಅನರ್ಹರಾಗಲಿದ್ದಾರೆ ಎಂದು ಬಿಜೆಪಿ ಮುಖಂಡೆ, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ (Pramila Nesargi) ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾವುದೇ ಚುನಾವಣೆಗೆ ಸ್ಪರ್ಧಿಸುವಾಗ ಆಸ್ತಿ, ಬ್ಯಾಂಕ್ ವಿವರ, ಜಮೀನು ಇವುಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಆದರೆ ಪ್ರಜ್ವಲ್ ರೇವಣ್ಣ ಸರಿಯಾಗಿ ಮಾಹಿತಿ ನೀಡದ ಕಾರಣ ಅವರನ್ನು ಹೈಕೋರ್ಟ್ (High Cout) ಅನರ್ಹ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಚ್.ಡಿ. ರೇವಣ್ಣ ಕುಟುಂಬವನ್ನ ರಾಜಕೀಯದಿಂದ ಶಾಶ್ವತವಾಗಿ ತೆಗೆಯುವುದೇ ನನ್ನ ಗುರಿ: ದೂರುದಾರ ದೇವರಾಜೇಗೌಡ
Advertisement
ಈ ಪ್ರಜ್ವಲ್ ರೇವಣ್ಣ ಅವರ ಅಕ್ರಮ ಕೆಲಸಕ್ಕೆ ಹೆಚ್‌ಡಿ ರೇವಣ್ಣ ಸಹಕಾರ ನೀಡಿದ್ದಾರೆ. ಸಹಕಾರ ನೀಡಿದ್ದರಿಂದ ಹೆಚ್‌ಡಿ ರೇವಣ್ಣ ಅವರು ತಪ್ಪಿತಸ್ಥರು. ಅವರನ್ನು ಅನರ್ಹಗೊಳಿಸಬೇಕೆಂದು ಎಂದು ನಾವು ಮನವಿ ಮಾಡಿದ್ದೇವೆ. ಕೋರ್ಟ್ ಮನವಿ ಪುರಸ್ಕರಿಸಿ ರೇವಣ್ಣ ಅವರಿಗೂ ನೋಟಿಸ್ ಜಾರಿ ಮಾಡಿದೆ ಎಂದು ಹೇಳಿದರು.
Advertisement
ಮಂಜು ಸಹ ಅಕ್ರಮ ಮಾಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಕೋರ್ಟ್ ಗಮನಕ್ಕೆ ತಂದಿದ್ದರು. ಹೀಗಾಗಿ ಎ ಮಂಜು ಅವರಿಗೂ ನಿಮ್ಮನ್ನು ಯಾಕೆ ಅನರ್ಹ ಮಾಡಬಾರದು ಎಂದು ಕೋರಿ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇಬ್ಬರು ಅನರ್ಹರಾಗಲಿದ್ದು ಇಬ್ಬರ ವಿರುದ್ಧವೂ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಪ್ರಮೀಳಾ ನೇಸರ್ಗಿ ತಿಳಿಸಿದರು.
Advertisement
Web Stories