ಬೆಂಗಳೂರು: ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಕನ್ನಡಿಗರನ್ನು ಹರಾಮಿಗಳು ಎಂದು ಅವಹೇಳನಕಾರಿ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಟ್ವಿಟರ್‍ನಲ್ಲಿ ಗೋವಾ ಸಚಿವರ ವಿರುದ್ದ ಧ್ವನಿ ಎತ್ತಿದ ಸಂಸದ ಪ್ರತಾಪ್ ಸಿಂಹ, ಗೋವಾ ಬಿಜೆಪಿ ಸಚಿವರ ಹೇಳಿಕೆಯನ್ನ ಖಂಡಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿ ಪರಿಕ್ಕರ್ ಜೀ ಅವರೇ ನಿಮ್ಮ ಸರ್ಕಾರದ ಉದಾರತೆ ಬಗ್ಗೆ ನಮಗೆ ಗೌರವ ಇದೆ. ಕಾಂಗ್ರೆಸ್‍ನ ಕೊಳಕು ರಾಜಕಾರಣದ ಹೊರತಾಗಿ ಕುಡಿಯುವ ನೀರು ಕೊಡುವ ವಿಷಯದ ನಿಮ್ಮ ನಿಲುವಿಗೆ ಗೌರವ ಇದೆ. ಆದ್ರೆ ಪದಗಳು ಉಚಿತವಾಗಿ ಸಿಗುತ್ತವೆ ಅಂತ ಮಾತನಾಡಬಾರದು. ಆ ಪದಗಳನ್ನ ಬಳಸುವಾಗ ಎಚ್ಚರವಿರಬೇಕು. ನಿಮ್ಮ ಸಚಿವ ವಿನೋದ್ ಪಾಲೇಕರ್ ಗೆ ಸರಿಯಾದ ಭಾಷೆ ಬಳಸಲು ಹೇಳಿ. ಇಲ್ಲವಾದರೆ ಅವರು ಇನ್ನೊಮ್ಮೆ ಕರ್ನಾಟಕಕ್ಕೆ ಕಾಲಿಟ್ಟರೆ ನಾವೇ ಪಾಠ ಕಲಿಸಬೇಕಾಗುತ್ತೆ ಅಂತ ಟ್ವಿಟರ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡರ ವಿರುದ್ಧದ ಹೇಳಿಕೆಗೆ ಗೋವಾ ಬಿಜೆಪಿ ವಿರುದ್ಧವೇ ಧ್ವನಿ ಎತ್ತಿದ ಪ್ರತಾಪ ಸಿಂಹ, ಮನೋಹರ್ ಪರಿಕ್ಕರ್ ಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದಾರೆ.
Advertisement
@manoharparrikar ji v respect u coz, despite Goa Congress’s dirt politics u showed generosity. Sir, Words r free, but one should be careful while using them, pls advise ur minister Vinod Palienkar to use proper language else if he set foot in our Karnataka again, v wil teach him. pic.twitter.com/rL2oXpV68U
— Pratap Simha (@mepratap) January 14, 2018
Advertisement
ವಿನೋದ್ ಪಾಲೇಕರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರೋ ಬಿಎಸ್‍ವೈ, ಪಾಲೇಕರ್ ತಕ್ಷಣ ಕನ್ನಡಿಗರ ಕ್ಷಮೆ ಕೇಳಲು ಆಗ್ರಹಿಸಿದ್ದಾರೆ. ಗೋವಾ, ಕರ್ನಾಟಕ ರಾಜ್ಯಗಳ ಮಧ್ಯೆ ಬಿರುಕು ಮೂಡಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕನ್ನಡಿಗರ ಬಗ್ಗೆ ಮಾತನಾಡಲು ಪಾಲೇಕರ್‍ಗೆ ಅಧಿಕಾರವನ್ನ ಯಾರೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
Advertisement
ಇಂದು ಬೆಳಗಾವಿಯ ಕಣಕುಂಬಿ ಕಳಸಾ ಯೋಜನಾ ಸ್ಥಳಕ್ಕೆ ಸಚಿವ ಎಂ.ಬಿ ಪಾಟೀಲ್ ಭೇಟಿ ನೀಡಲಿದ್ದಾರೆ. ನಿನ್ನೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಕಳಸಾ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರು. ಪಾಲೇಕರ್ ಹೇಳಿಕೆಯನ್ನು ಎಂ.ಬಿ ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ. ಸಚಿವರು ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದ್ರೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಅತ್ತ ವಿನೋದ್ ಪಾಲೇಕರ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಇಲ್ಲದ ಪತ್ರಕರ್ತನಿಂದ ಸುದ್ದಿ ಪ್ರಕಟವಾಗಿದೆ ಎಂದಿದ್ದಾರೆ. ಮಹದಾಯಿ ವಿಚಾರದಲ್ಲಿ ನಮ್ಮ ನಿರ್ಧಾರ ಅಚಲ ಎಂದು ಸಿಎಂ ಸಿದ್ದರಾಮಯ್ಯ ಹಾಘೂ ಬಿಎಸ್‍ವೈಗೆ ಪಾಲೇಕರ್ ಸ್ಪಷ್ಟನೆ ನೀಡಿದ್ದಾರೆ.
The so-called abusive words were misquoted & reported by Journalist without being present for press conference.Our Goa Govt’s decision to protect its water remains unchanged. @siddaramaiah @BSYBJP
— Vinod Palyekar (@vinod_palyekar) January 15, 2018
ಕನ್ನಡಿಗರನ್ನು ಹರಾಮಿಗಳು ಎಂದಿದ್ದಾಯ್ತು ಇದೀಗ ಕನ್ನಡಿಗರ ವಿರುದ್ಧವೇ ದೂರು ನೀಡಲು ಗೋವಾ ಸಜ್ಜಾಗಿದೆ. ಕರ್ನಾಟಕ ಅಕ್ರಮ ಎಸಗುತ್ತಿದೆ ಎಂದು ದೂರಲು ಹಗಲು ರಾತ್ರಿ ಗೋವಾ ಕಷ್ಟಪಟ್ಟಿದ್ದು, ಗೋವಾದ ಮಹದಾಯಿ ತಂಡದಿಂದ ದಾಖಲೆಗಳ ತಯಾರಿ ನಡೆದಿದೆ. ನ್ಯಾಯಾಧೀಕರಣದ ಮುಂದೆ ವಾದ ಮಂಡಿಸಲು ಅಗತ್ಯ ದಾಖಲೆಗಳನ್ನು ಗೋವಾ ರೆಡಿ ಮಾಡಿಕೊಂಡಿದೆ.