ಅಫೇರ್ (Affair) ಅನ್ನೋದು ಲೈಂಗಿಕ ಸಂಬಂಧ, ಪ್ರಣಯ ಸ್ನೇಹ ಅಥವಾ ಭಾವೋದ್ರಿಕ್ತ ಬಾಂಧವ್ಯ. ವಿವಾಹಿತರು ಮತ್ತೊಬ್ಬರೊಂದಿಗೆ ಇಂತಹ ಸಂಬಂಧ ಹೊಂದಿದ್ರೆ ಅದು ಅಫೇರ್. ಇದು ಎಷ್ಟು ನೈತಿಕ ಎಂದು ಪ್ರಶ್ನಿಸೋಕೆ ಸಾಧ್ಯವಿಲ್ಲ. ಆದರೆ ಇಂತಹ ಸಂಬಂಧದಿಂದ ಏನೆಲ್ಲ ಅವಾಂತರು ಆಗಬಹುದು ಎಂಬುದನ್ನು ಹಲವು ಸುದ್ದಿಗಳನ್ನು ಓದಿ ತಿಳಿದಿದ್ದೇವೆ.
ವಿವಾಹಿತರೊಡಗಿನ ಅಫೇರ್ ನೈತಿಕತೆಯ ಹಾದಿಯನ್ನು ಮುರಿಯುತ್ತೆ. ವಿವಾಹಿತರು ಇಂತಹ ಸಂಬಂಧ ಹೊಂದಿದ್ರೆ, ಅದು ದಾಂಪತ್ಯಕ್ಕೆ ಮಾಡಿದ ದ್ರೋಹವೇ ಆಗುತ್ತೆ. ಕೆಲವರು ಮೋಜಿಗಾಗಿ ಇಂತಹ ಆಯ್ಕೆ ಮಾಡಿಕೊಳ್ಳಬಹುದು. ಆದ್ರೆ ಇದು ಪರಿಹರಿಸಲಾಗದ ಸಮಸ್ಯೆ. ಮುಂದೆ ಇದರಿಂದ ಎದುರಾಗುವ ಪರಿಣಾಮಗಳು ಅಷ್ಟೇ ಕಠಿಣವಾಗಿರುತ್ತೆ. ವಿವಾಹಿತರೊಂದಿಗೆ ಅಫೇರ್ ಇಟ್ಟುಕೊಂಡಿದ್ರೆ ಅಂಥವರಿಗೆ ಇಲ್ಲಿ ಒಂದಷ್ಟು ಸಲಹೆ ಇದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?
Advertisement
Advertisement
ಜವಾಬ್ದಾರಿ ಹೊತ್ತುಕೊಳ್ಳಿ
ವಿವಾಹಿತರೊಂದಿಗೆ ಅಫೇರ್ ಇಟ್ಟುಕೊಂಡಿರೋರು ಜವಾಬ್ದಾರಿಗಳಿಂದ ಎಸ್ಕೇಪ್ ಆಗ್ತಾರೆ. ವಾಸ್ತವ ಪ್ರಪಂಚದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸ್ತಾರೆ. ಆದರೆ ಎಲ್ಲಿವರೆಗೆ ಹೀಗೆ ತಪ್ಪಿಸಿಕೊಳ್ಳಲು ಸಾಧ್ಯ? ಅದಕ್ಕೊಂದು ಕೊನೆ ಇದ್ದೇ ಇರುತ್ತೆ. ಅಫೇರ್ ಇಟ್ಟುಕೊಂಡಿದ್ರೆ ಮುಂದೆ ಅದರಿಂದಾಗುವ ಪರಿಣಾಮದ ಜವಾಬ್ದಾರಿಯನ್ನೂ ಹೊರಬೇಕಾಗುತ್ತೆ.
Advertisement
ವೃತ್ತಿಪರ ಮತ್ತು ವೈಯಕ್ತಿಕ ಜೀವನಕ್ಕೆ ತೊಂದರೆ
ವಿವಾಹಿತರೊಂದಿಗೆ ಅಫೇರ್ ಇದ್ದವರು ವೈಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ತುಂಬಾ ತೊಂದರೆ ಎದುರಿಸುತ್ತಾರೆ. ನಿಮ್ಮ ಸಂಗಾತಿಯು ಅವರ ಸಂಗಾತಿಯೊಂದಿಗೆ ಹೋಗುವ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಸಾಧ್ಯವಾಗಲ್ಲ. ಫೋನ್ ಸಂಖ್ಯೆಗಳನ್ನು ಸಹ ಬದಲಿಸಬೇಕಾಗುತ್ತೆ. ಸಂಗಾತಿಯೊಂದಿಗೆ ಸುತ್ತಲು ಅವರ ಬಿಡುವಿನ ಸಮಯಕ್ಕಾಗಿ ಕಾಯಬೇಕಾಗುತ್ತೆ. ಇದು ನಿಮ್ಮ ಕೆಲಸ ಮತ್ತು ವೈಯಕ್ತಿಕ ಬದುಕಿಗೆ ತೊಂದರೆ ಉಂಟುಮಾಡುತ್ತೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್ ಗುಣಗಳೇನು ಗೊತ್ತಾ?
Advertisement
ಈ ಬಗ್ಗೆ ಯೋಚಿಸಿ
ನಿಮ್ಮ ಅಗತ್ಯತೆ ಪೂರೈಸಿಕೊಳ್ಳಲು ಕುಟುಂಬವೊಂದನ್ನು ಒಡೆಯುವ ಹಕ್ಕು ನಿಮಗಿದೆಯೇ? ನೀವು ವಿವಾಹಿತರೊಂದಿಗೆ ಇರಲು ಇಚ್ಛಿಸಿದಾಗ, ನಿಮ್ಮ ಉದ್ದೇಶ ಅದಾಗದಿದ್ದರೂ ಕುಟುಂಬವೊಂದನ್ನು ಒಡೆಯುತ್ತೀರಿ. ಈ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು.
ಹೊರೆಗಳು ಹೆಚ್ಚಾಗುತ್ತೆ
ವಿವಾಹಿತರೊಂದಿಗೆ ಅಫೇರ್ ಇದ್ರೆ ಹೊರೆ ಕೂಡ ಹೆಚ್ಚಾಗಿರುತ್ತೆ. ಅಪರಾಧ, ಅವಮಾನ ಮತ್ತು ಮುಜುಗರದ ಅಲೆಗಳ ಹೊಡೆತವನ್ನು ಎದುರಿಸಬೇಕಾಗುತ್ತೆ. ನೀವು ಕೆಲವೊಮ್ಮೆ ಪ್ರೀತಿಗೆ ಅರ್ಹರಲ್ಲ ಎಂಬ ಭಾವನೆಯೂ ಬರಬಹುದು. ಭವಿಷ್ಯದ ಹಾದಿ ನಿರ್ಧರಿಸುವುದು ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಮೇಲಿದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..