ತಿರುಪತಿ: ತಿಮ್ಮಪ್ಪನ ಮಹಾಪ್ರಸಾದ ಲಡ್ಡುನಲ್ಲಿ (Tirupati Laddu Row) ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಸಿಎಂ ಆರೋಪಕ್ಕೆ ಪೂರಕವಾಗಿ ಟಿಟಿಡಿ (TTD) ಇಓ ಶ್ಯಾಮಲರಾವ್ ಹೇಳಿಕೆ ನೀಡಿದ್ದಾರೆ. ತಮಿಳುನಾಡು (Tamilnadu) ಮೂಲದ ಎಆರ್ ಫುಡ್ಸ್ ಸರಬರಾಜು ಮಾಡಿದ ತುಪ್ಪ (Ghee) ಕಲಬೆರಕೆಯಿಂದ ಕೂಡಿತ್ತು. ತಕ್ಷಣವೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಲಡ್ಡುಗೆ ಬಳಸುವ ತುಪ್ಪದ ಗುಣಮಟ್ಟ ಪರೀಕ್ಷೆಗೆ ಟಿಟಿಡಿ ಸ್ವಂತ ಲ್ಯಾಬ್ ಹೊಂದಿಲ್ಲ. ಅಧಿಕಾರಿಗಳು ಈ ಹಿಂದೆ ಪರೀಕ್ಷೆ ಮಾಡಿರಲಿಲ್ಲ. ಬರೀ 411 ರೂಪಾಯಿಗೆ ಕೆಜಿ ತುಪ್ಪ ಸರಬರಾಜು ಮಾಡಿದ್ದಾರೆ. ಈ ದರಕ್ಕೆ ಉತ್ತಮ ಗುಣಮಟ್ಟದ ತುಪ್ಪ ಪೂರೈಕೆ ಸಾಧ್ಯನಾ ಎಂದು ಎಂದು ಶ್ಯಾಮಲರಾವ್ ಪ್ರಶ್ನಿಸಿದ್ದಾರೆ.
Advertisement
Advertisement
ದೇಗುಲದ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತಲು ಅವರಂತೂ, ಕಳೆದ ಐದು ವರ್ಷದಿಂದ ಈ ಮಹಾ ಪಾಪ ನಡೆಯುತ್ತಿತ್ತು ಎಂದು ಆಪಾದಿಸಿದ್ದಾರೆ. ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪಿಸುವಂತೆ ಕೇಂದ್ರವನ್ನು ಡಿಸಿಎಂ ಪವನ್ ಕಲ್ಯಾಣ್ ಆಗ್ರಹಿಸಿದ್ದಾರೆ. ಆಡಳಿತಾರೂಢ ಟಿಡಿಪಿ ನಾಯಕರೆಲ್ಲಾ ಜಗನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ನಂದಿನಿ ತುಪ್ಪ ಕಡ್ಡಾಯ: ಮುಜುರಾಯಿ ಇಲಾಖೆ ಆದೇಶ
Advertisement
ಕಲಬೆರೆಕೆ ತುಪ್ಪ ಕಳುಹಿಸಿಲ್ಲ:
ನಾವು ಟಿಟಿಡಿಗೆ ಕಲಬೆರೆಕೆ ತುಪ್ಪ ಕಳುಹಿಸಿಲ್ಲ. ಇಲ್ಲಿಯವರೆಗೆ ನಮ್ಮ ವಿರುದ್ಧ ಯಾವುದೇ ದೂರುಗಳಿಲ್ಲ. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ನಾವು ಕಾನೂನು ಸಮರ ನಡೆಸುತ್ತೇವೆ ಎಂದು ಎಆರ್ ಫುಡ್ಸ್ ಹೇಳಿದೆ.
Advertisement