26ನೇ ವಯಸ್ಸಿಗೆ ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ

Public TV
1 Min Read
Sophia Leone 1 1

ನೀಲಿ ತಾರೆ ಸೋಫಿಯಾ ಲಿಯೋನ್ (Sophia Leone) ಅನುಮಾನಾಸ್ಪದ ರೀತಿಯಲ್ಲಿ ನಿಧನರಾಗಿದ್ದಾರೆ. ನಟಿ ಸೋಫಿಯಾ ತನ್ನ 26ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಸೋಫಿಯಾ ಅವರ ಶವ ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ನಟಿಯ ಸಾವಿನ ಸುದ್ದಿಯನ್ನು ಆಕೆಯ ಮಲತಂದೆ ಮೈಕ್ ರೊಮೆರೊ ಖಚಿತಪಡಿಸಿದ್ದಾರೆ. ಸೋಫಿಯಾ ಅವರ ಹಠಾತ್ ಸಾವು (Death) ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ. ಇದನ್ನೂ ಓದಿ:ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ದರ್ಶನ್ ಭೇಟಿ

Sophia Leone

ಸೋಫಿಯಾ ಲಿಯೋನ್ ಸಾವಿನಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಅವಳ ತಾಯಿ ಮತ್ತು ಕುಟುಂಬದ ಪರವಾಗಿ, ನಮ್ಮ ಪ್ರೀತಿಯ ಸೋಫಿಯಾ ಅವರ ನಿಧನದ ಸುದ್ದಿಯನ್ನು ನಾನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇನೆ ಎಂದು ಸೋಫಿಯಾ ಮಲತಂದೆ ಮೈಕ್ ರೊಮೆರೊ ಹೇಳಿದ್ದಾರೆ. ಮಾರ್ಚ್‌ 1ರಂದು ಸೋಫಿಯಾ ಮೃತಪಟ್ಟಿದ್ದು, ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ತನಿಖೆ ನಡೆಯುತ್ತಿದೆ.

ಸೋಫಿಯಾ 1997ರ ಜೂನ್ 10ರಂದು ಅಮೆರಿಕಾದ ಮಿಯಾಮಿಯಲ್ಲಿ ಜನಿಸಿದ್ದರು. ಸೋಫಿಯಾ 18ನೇ ವಯಸ್ಸಿನಲ್ಲಿಯೇ ನೀಲಿ ಚಿತ್ರಗಳನ್ನು ಕಾಣಿಸಿಕೊಳ್ಳಲು ಆರಂಭಿಸಿದ್ದರು.

Share This Article