ವಾಷಿಂಗ್ಟನ್: ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕಳಪೆ ಬ್ಯಾಟಿಂಗ್‌ನಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆ ಅಮೆರಿಕದ ನೀಲಿ ತಾರೆ ಕೇಂದ್ರ ಲಸ್ಟ್ (Kendra Lust) ಹಿಟ್‌ಮ್ಯಾನ್ ಪರ ಬ್ಯಾಟ್ ಬೀಸಿದ್ದಾರೆ.
ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಮ್ಮ ಫೋಟೋ ಜೊತೆಗೆ ರೋಹಿತ್ ಶರ್ಮಾ (Rohit Sharma) ಅವರ ಮಾರ್ಫ್ ಮಾಡಿದ ಫೋಟೋವನ್ನ ಹಂಚಿಕೊಂಡಿದ್ದಾರೆ. ಇದರೊಂದಿಗೆ ʻನೀವು ಭಾರತೀಯ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್… ದೃಢವಾಗಿರಿ ಎಂದು ಬರೆದುಕೊಂಡಿದ್ದಾರೆ. ಕೇಂದ್ರ ಲಸ್ಟ್ ಪ್ರತಿಕ್ರಿಯೆಗೆ ಲಕ್ಷಾಂತರ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಆದ್ರೆ ಚಹಲ್ ಧನಶ್ರೀಗೆ ಎಷ್ಟು ಜೀವನಾಂಶ ಕೊಡಬೇಕು? ಇಬ್ಬರ ಸಂಪತ್ತು ಎಷ್ಟಿದೆ?
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನ ಭಾರೀ ಟೀಕೆಗೆ ಗುರಿಯಾಗಿತ್ತು. ರೋಹಿತ್ ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಾರೆ ಅನ್ನೋ ವದಂತಿ ಎದ್ದಿತ್ತು. ಇದನ್ನೂ ಓದಿ: ಬ್ಯಾಟಿಂಗ್‌ನಲ್ಲಿ ಧಮ್ ಇಲ್ಲ – ಕೋಚ್‌ಗಳು ಏನ್ ಮಾಡ್ತಿದ್ದಾರೆ? – ಗವಾಸ್ಕರ್ ತೀವ್ರ ತರಾಟೆ
ಬಿಜಿಟಿ ಸರಣಿಯಲ್ಲಿ ನಿರಂತರ ವೈಫಲ್ಯ ಕಂಡ ರೋಹಿತ್ ಶರ್ಮಾ, ಟೆಸ್ಟ್ ನಾಯಕತ್ವ ತ್ಯಜಿಸಬೇಕು ಎಂಬ ಆಗ್ರಹ ಸಹ ಕೇಳಿ ಬಂದಿತ್ತು. ಭಾರತದ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ, ಕೂಡ ಶರ್ಮಾ ತಮ್ಮ ಟೆಸ್ಟ್ ನಾಯಕತ್ವ ತ್ಯಜಿಸುವ ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಬಿಜಿಟಿ ಬಳಿಕ ಈ ಕುರಿತು ಅವರು ಸೂಕ್ತ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ಗುಡ್‌ಬೈ? – ಹಿಂಟ್ ಕೊಟ್ಟ ರವಿ ಶಾಸ್ತ್ರಿ