ವಾಷಿಂಗ್ಟನ್: ನಾಜಿ ನಾಯಕ ಅಡಾಲ್ಫ್ ಹಿಟ್ಲರ್‌ಗೆ ಸೇರಿದ್ದು ಎನ್ನಲಾದ ಕೈಗಡಿಯಾರವನ್ನು ಹರಾಜಿಗೆ ಹಾಕಲಾಗಿದ್ದು, ಭಾರೀ ಮೊತ್ತಕ್ಕೆ ಕೈಗಡಿಯಾರ ಮಾರಾಟವಾಗಿದೆ.
ಅಮೆರಿಕದಲ್ಲಿ ನಡೆದ ಹರಾಜಿನಲ್ಲಿ ಹಿಟ್ಲರ್ ವಾಚ್ ಬರೋಬ್ಬರಿ 8.70 ಕೋಟಿ ರೂ. (1.1 ಮಿಲಿಯನ್ ಯುಎಸ್ ಡಾಲರ್)ಗೆ ಮಾರಾಟವಾಗಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ
Advertisement
Advertisement
ಅನಾಮಧೇಯ ಬಿಡ್ಡರ್‌ಗೆ ಮಾರಾಟವಾದ ಹ್ಯೂಬರ್ ಕೈಗಡಿಯಾರವು ಸ್ವಸ್ತಿಕ್ ಮಾದರಿ ಚಿತ್ರ ಹಾಗೂ AH ಎಂಬ ಆಂಗ್ಲ ಅಕ್ಷರಗಳನ್ನು ಹೊಂದಿದೆ. ಇದನ್ನು ಅಲೆಕ್ಸಾಂಡರ್ ಹಿಸ್ಟಾರಿಕಲ್ ಆಕ್ಷನ್ಸ್ ಹರಾಜು ಹಾಕಿತು. ಇದು ಚಿನ್ನದ ರಿವರ್ಸಿಬಲ್ ವಾಚ್ ಆಗಿದೆ. ಇದನ್ನು ಹಿಟ್ಲರ್‌ಗೆ ಏಪ್ರಿಲ್ 20, 1933 ರಂದು ಅವರ 44ನೇ ಹುಟ್ಟುಹಬ್ಬದಂದು ಉಡುಗೊರೆಯಾಗಿ ನೀಡಲಾಗಿತ್ತು. ಇದನ್ನು ಐತಿಹಾಸಿಕ ಎರಡನೇ ಮಹಾಯುದ್ಧದ ಅವಶೇಷ ಎಂದು ವಿವರಿಸಲಾಗಿದೆ.
Advertisement
ಗಡಿಯಾರವು ಮೂರು ದಿನಾಂಕಗಳನ್ನು ಒಳಗೊಂಡಿದೆ. ಹಿಟ್ಲರ್‌ನ ಜನ್ಮ ದಿನಾಂಕ, ಅವರು ಚಾನ್ಸೆಲರ್ ಆದ ದಿನಾಂಕ ಮತ್ತು ಮಾರ್ಚ್ 1933 ರಲ್ಲಿ ನಾಜಿ ಪಕ್ಷವು ಚುನಾವಣೆಯಲ್ಲಿ ಗೆದ್ದ ದಿನಾಂಕ ಇದೆ. ಹರಾಜು ಸಂಸ್ಥೆಯ ಪ್ರಕಾರ, ಸುಮಾರು 30 ಫ್ರೆಂಚ್ ಸೈನಿಕರು ಬರ್ಘೋಫ್ ಮೇಲೆ ದಾಳಿ ಮಾಡಿದಾಗ ವಾಚ್ ಅನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಬಿನ್ ಲಾಡೆನ್ ಕುಟುಂಬದಿಂದ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಭಾರೀ ಮೊತ್ತದ ದೇಣಿಗೆ
Advertisement
ಈ ಕೈಗಡಿಯಾರದ ಹರಾಜನ್ನು ಯಹೂದಿ ನಾಯಕರು ಖಂಡಿಸಿದ್ದರು. ಮಾರಾಟವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು. 34 ಯಹೂದಿ ನಾಯಕರು ಸಹಿ ಮಾಡಿದ್ದ ಬಹಿರಂಗ ಪತ್ರದಲ್ಲಿ, ಈ ವಾಚ್ ಹರಾಜಿಗೆ ವಿರೋಧ ವ್ಯಕ್ತಪಡಿಸಲಾಗಿತ್ತು ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.