ನವದೆಹಲಿ: ಎಸ್‌ಎಂ ಕೃಷ್ಣ (SM Krishna) ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೇ ಶ್ರಮಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಮೋದಿ ಅವರು ಕೃಷ್ಣ ಅವರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿಡಿದ್ದಾರೆ. ಇದನ್ನೂ ಓದಿ: ಎಸ್‌ಎಂಕೆ ಐಟಿ ಬಿಟಿ ಕೊಡುಗೆಗೆ ಕರ್ನಾಟಕ ಸದಾ ಋಣಿ: ಸಿದ್ದರಾಮಯ್ಯ
Advertisement
Advertisement
I have had many opportunities to interact with Shri SM Krishna Ji over the years, and I will always cherish those interactions. I am deeply saddened by his passing. My condolences to his family and admirers. Om Shanti.
— Narendra Modi (@narendramodi) December 10, 2024
Advertisement
ಪೋಸ್ಟ್‌ನಲ್ಲಿ ಏನಿದೆ?
ಶ್ರೀ ಎಸ್.ಎಂ.ಕೃಷ್ಣಾಜಿಯವರು ಅಸಾಧಾರಣ ನಾಯಕ. ಸಮಾಜದ ಎಲ್ಲ ವರ್ಗಗಳ ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೇ ಶ್ರಮಿಸಿದವರು. ಇದನ್ನೂ ಓದಿ: ಎಸ್‌ಎಂ ಕೃಷ್ಣ ಅಂತಿಮ ದರ್ಶನ ಪಡೆದ ರಮ್ಯಾ
Advertisement
ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದ್ದಾರೆ. ಕೃಷ್ಣ ಜೀ ಅವರು ಉತ್ತಮ ಓದುಗ ಮತ್ತು ಚಿಂತಕರೂ ಆಗಿದ್ದರು.
ಎಸ್.ಎಂ.ಕೃಷ್ಣ ಜೀ ಅವರೊಂದಿಗೆ ಸಂವಹನ ನಡೆಸಲು ಅನೇಕ ಅವಕಾಶ ಸಿಕ್ಕಿತ್ತು. ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
ಎಸ್‌ಎಂ ಕೃಷ್ಣ ಅವರ ಅನುಪಮ ಸೇವೆಗಾಗಿ ಭಾರತ ಸರ್ಕಾರ 2023 ರಲ್ಲಿಪದ್ಮ ವಿಭೂಷಣ ಗೌರವವನ್ನು ನೀಡಿ ಪುರಸ್ಕರಿಸಿತ್ತು.