ಮುಂಬೈ: ನಟ (Actor), ಮಾಡೆಲ್, ಫೋಟೋಗ್ರಾಫರ್ ಆದಿತ್ಯ ಸಿಂಗ್ ರಜಪೂತ್ (Aditya Singh Rajput) (32) ಸಾವನ್ನಪ್ಪಿದ್ದಾರೆ.
ಮೇ 22 ರಂದು ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿರುವ (Mumbai Apartment) ತಮ್ಮ ಮನೆಯ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಫೌಂಡೇಶನ್ ನಿಂದ 5,000 ಪದವಿ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ!
Advertisement
Actor Aditya Singh Rajput found dead at his apartment in Andheri area. Body sent for post-mortem. Investigation underway: Mumbai Police
(Pic: Aditya’s Instagram) pic.twitter.com/1ZHbKB9ilp
— ANI (@ANI) May 22, 2023
Advertisement
ಮುಂಬೈನ ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಬಾತ್‌ರೂಮ್‌ನಲ್ಲಿ ಬಿದ್ದಿದ್ದ ಆದಿತ್ಯ ಸಿಂಗ್ ರಜಪೂತ್ ಅವರನ್ನ ಸ್ನೇಹಿತರೊಬ್ಬರು ಹಾಗೂ ಅಪಾರ್ಟ್‌ಮೆಂಟ್‌ನ ವಾಚ್‌ಮ್ಯಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆ ತಲುಪುವ ಮುನ್ನವೇ ಆದಿತ್ಯ ಸಿಂಗ್ ರಜಪೂತ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
Advertisement
ರಜಪೂತ್ ಸಾವಿನ ಬಗ್ಗೆ ಅನುಮಾನಾಸ್ಪದವಾಗಿ ಯಾವುದೂ ಕಂಡುಬಂದಿಲ್ಲ. ಆಕಸ್ಮಿಕ ಸಾವಿನಂತೆ ಕಂಡುಬಂದಿದೆ. ಅವರ ದೇವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: FAME II ಸಬ್ಸಿಡಿ ಕಡಿತ; ಜೂನ್ 1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದುಬಾರಿ
Advertisement
ಕಾರಣ ಏನು?
ಮುಂಬೈನಲ್ಲಿ ಕಾಸ್ಟಿಂಗ್ ಕೋ-ಆರ್ಡಿನೇಟರ್ ಆಗಿಯೂ ಕೆಲಸ ಮಾಡುತ್ತಿರುವ ಆದಿತ್ಯ ಸಿಂಗ್ ರಜಪೂತ್ ನಟ ಹಾಗೂ ಮಾಡೆಲ್ ಕೂಡ ಹೌದು. ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿನ 11ನೇ ಮಹಡಿಯಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಮನೆಯ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ. ವರದಿಗಳ ಪ್ರಕಾರ, ಡ್ರಗ್ಸ್ ಓವರ್‌ಡೋಸ್‌ನಿಂದಾಗಿ ಆದಿತ್ಯ ಸಿಂಗ್ ರಜಪೂತ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.