– ಮಂಗಳೂರಿಗೆ ಆದಿತ್ಯ ರಾವ್
ಬೆಂಗಳೂರು: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ಆರೋಪಿ ಆದಿತ್ಯ ರಾವ್‍ನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಲಾಗಿದೆ. ನ್ಯಾಯಾಲಯದ ಎದುರು ಹಾಜರು ಪಡಿಸುವ ಹಿನ್ನೆಲೆಯಲ್ಲಿ ಮಂಗಳೂರಿಗೆ ಕರೆಕೊಂಡು ಹೋಗಲು ಆರೋಪಿ ಆದಿತ್ಯನನ್ನು ಪೊಲೀಸರು ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಕರೆತಂದಿದ್ದು, ಈ ವೇಳೆ ಆತನಿಗೆ ತಿನ್ನಲು ನೀಡಲಾಗಿದ್ದ ಸಮೋಸವನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಇಂದು ಸಂಜೆ 7:15ಕ್ಕೆ ಕೆಐಎಎಲ್‍ನಿಂದ ಮಂಗಳೂರಿಗೆ ತೆರಳುವ ವಿಮಾನವಿದ್ದು, ಸಂಜೆ ವೇಳೆಗೆ ಆದಿತ್ಯನನ್ನು ಕರೆತಂದ ಪೊಲೀಸರು ಆತನನ್ನು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಈ ವೇಳೆ ಆದಿತ್ಯಗೆ ಪೊಲೀಸರು ತಿನ್ನಲು ಸಮೋಸಾ ನೀಡಿದ್ದು, ಆದರೆ ಅದನ್ನು ತಿನ್ನಲು ಆದಿತ್ಯ ನಿರಾಕರಿಸಿದ್ದಾನೆ. ಇದನ್ನೂ ಓದಿ; ಹರಸಾಹಸ ಪಟ್ಟು 2018ರಲ್ಲಿ ಆದಿತ್ಯನನ್ನು ಹಿಡಿದಿದ್ರು ಬೆಂಗ್ಳೂರು ಪೊಲೀಸರು
Advertisement
Advertisement
ಆರೋಪಿ ಆದಿತ್ಯ ರಾವ್ ಇಂದು ಪೊಲೀಸರ ಎದುರು ಶರಣಾದ ಹಿನ್ನೆಲೆಯಲ್ಲಿ ಆತನನ್ನು ಹಲಸೂರು ಪೊಲೀಸರು ವಿಚಾರಣೆ ನಡೆಸಿ ಬಳಿಕ ನಗರ 1ನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದರು. ಆರೋಪಿಯ ಪ್ರಾಥಮಿಕ ಹೇಳಿಕೆ ಪರಿಶೀಲನೆ ನಡೆಸಿ ನ್ಯಾಯಾಧೀಶರು ಮಂಗಳೂರು 6ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಮಂಗಳೂರಿಗೆ ಕರೆದುಕೊಂಡು ಹೋಗಲು ಕೆಐಎಎಲ್ ವಿಮಾನ ನಿಲ್ದಾಣದಕ್ಕೆ ಸಂಜೆ 5:15ರ ವೇಳೆಗೆ ಕರೆ ತಂದಿದ್ದರು. ಇದನ್ನೂ ಓದಿ: I Am Fit And Fine- ವೈದ್ಯರ ಬಳಿ ಆದಿತ್ಯ ರಾವ್ ಡೈಲಾಗ್
Advertisement
ವಿಮಾನ ನಿಲ್ದಾಣದ ಪೊಲೀಸ್ ರಾಣೆಯಲ್ಲಿ ಕೆಲ ನಿಯಮಗಳನ್ನು ಪೂರೈಸಲು ಹಾಗೂ ವಿಮಾನದ ಅವಧಿ ತಡವಾದ ಕಾರಣ ಆತನನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು ಎನ್ನಲಾಗಿದೆ. ಈ ವೇಳೆ 2018ರ ಹುಸಿ ಬಾಂಬ್ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಿಂದ ಕೆಲ ಮಾಹಿತಿಯನ್ನು ಪಡೆದ್ದರು ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿದ್ದ ಸಂದರ್ಭದಲ್ಲಿ ಮಂಗಳೂರು ಪೊಲೀಸರಿಗೆ ಸೇರಿದಂತೆ ಆರೋಪಿಗೆ ಸಮೋಸ ನೀಡಲಾಗಿತ್ತು.
Advertisement
ಮಂಗ್ಳೂರಿಗೆ ಆದಿತ್ಯ: ಆರೋಪಿ ಆದಿತ್ಯ ರಾವ್‍ನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ಮಂಗಳೂರಿಗೆ ಕರೆದುಕೊಂಡು ಹೋದರು. ಹಲಸೂರುಗೇಟ್ ಪೊಲೀಸರಿಂದ ಆದಿತ್ಯ ರಾವ್ ನನ್ನ ವಶಕ್ಕೆ ಪಡೆದ ಮಂಗಳೂರು ಪೊಲೀಸರ ತಂಡ ನೇರವಾಗಿ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!
ಪೊಲೀಸ್ ಠಾಣೆಯಲ್ಲಿ ಕಾಫಿ-ಟೀ, ಸಮೋಸ ಸವಿದ ಪೊಲೀಸರ ತಂಡ 6:00 ಗಂಟೆ ಸುಮಾರಿಗೆ ನೇರವಾಗಿ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಡಿಪಾರ್ಚರ್ ಗೇಟ್ ನಂ.1ರ ಮೂಲಕ ವಿಮಾನ ನಿಲ್ದಾಣದ ಒಳಭಾಗಕ್ಕೆ ಕರೆದುಕೊಂಡು ಹೋದರು. ಸಂಜೆ 7.15 ರ ಸ್ಪೈಸ್ ಜೆಟ್ ವಿಮಾನದಲ್ಲಿ ಆದಿತ್ಯ ರಾವ್ ನನ್ನ ಕರೆದುಕೊಂಡು ಮಂಗಳೂರಿನತ್ತ ಪೊಲೀಸರು ಪ್ರಯಾಣ ಬೆಳೆಸಿದರು.