– ಪತ್ನಿ, ಮಕ್ಕಳನ್ನು ಸಾಕುವುದು ಯಾರು ಎಂದು ಮದ್ವೆಯಾಗದ ಆರೋಪಿ
– ಲ್ಯಾಪ್‍ಟಾಪ್ ಕದಿಯುವುದನ್ನು ಹವ್ಯಾಸ ಮಾಡ್ಕೊಂಡಿದ್ದ
ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಬಂಧನಕ್ಕೊಳಗಾದ ಆದಿತ್ಯ ರಾವ್ ಭರ್ತಿ ನಾಲ್ಕು ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದನು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.
ಮೆಕ್ಯಾನಿಕಲ್ ಎಂಜಿನಿಯರ್, ಎಂಬಿಎ ಪದವಿ ಓದಿದ್ದ ಆದಿತ್ಯ ಬೆಂಗಳೂರಿನ ಮಹಾತ್ಮ ಗಾಂಧಿ(ಎಂಜಿ) ರಸ್ತೆಯಲ್ಲಿರುವ ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಕಚೇರಿಯಲ್ಲಿ ಹೆಚ್ಚು ಎಸಿ ಹಾಕುತ್ತಾರೆ ಎಂದು ಕೆಲಸ ಬಿಟ್ಟಿದ್ದ. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್
Advertisement
Advertisement
ನೋಡುವುದಕ್ಕೆ ಸಭ್ಯಸ್ಥನಾಗಿ ಹೈಫೈ ಇಂಗ್ಲಿಷ್ ಮಾತನಾಡುತ್ತಿದ್ದ ಆದಿತ್ಯ ಕಳ್ಳತನವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದ. ಈ ಹಿಂದೆ ಪೇಯಿಂಗ್ ಗೆಸ್ಟ್ ನಲ್ಲಿದ್ದಾಗ ರೂಮೇಟ್‍ನ ಲ್ಯಾಪ್ ಟಾಪ್ ಹಾಗೂ 2013ರಲ್ಲಿ ಬೆಂಗಳೂರಿನ ವಿಮಾ ಕಂಪನಿಯಲ್ಲಿ ಕೆಲಸ ಮಾಡಿದ್ದಾಗ ಸಹದ್ಯೋಗಿ ಲ್ಯಾಪ್ ಟಾಪ್ ಕೂಡ ಕದ್ದಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಅಲ್ಲದೆ ಈ ಬಗ್ಗೆ ಸದ್ದಗುಂಟೆ ಹಾಗೂ ಜಯನಗರ ಠಾಣೆಯಲ್ಲೂ ದೂರು ದಾಖಲಾಗಿತ್ತು. ಇದನ್ನೂ ಓದಿ: ಮಾನಸಿಕ ರೋಗಿಯಂತಿದ್ದ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ: ಆದಿತ್ಯ ಸಹದ್ಯೋಗಿ
Advertisement
Advertisement
ಸದಾ ಮೌನಿ ಆಗಿರುತ್ತಿದ್ದ ಆದಿತ್ಯ ಬಳಿ ಉತ್ತಮ ಸಂಬಳ ಬರುತ್ತಿದ್ದ ಬ್ಯಾಂಕ್ ಕೆಲಸವನ್ನು ತೊರೆದಿದ್ದು ಯಾಕೆ ಎಂದು ಕೇಳಿದ್ದಕ್ಕೆ, ಸಂಬಳ ಉತ್ತಮವಾಗಿ ಬರುತ್ತಿತ್ತು. ಆದರೆ ನನಗೆ ಎಸಿ ಆಗುವುದಿಲ್ಲ. ನೈಸರ್ಗಿಕ ಗಾಳಿ ಬೇಕು. ಈ ಕಾರಣಕ್ಕೆ ನಾನು ಉದ್ಯೋಗ ತೊರೆದೆ ಎಂದು ಹೇಳಿದ್ದ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ
ಈಗ 40 ವರ್ಷವಾಗಿದ್ದು, ಮದುವೆ ಯಾಕೆ ಆಗಿಲ್ಲ ಎಂದು ಕೇಳಿದಾಗ, ನನ್ನನ್ನೇ ನಾನು ಸಾಕಿಕೊಳ್ಳೋದು ಕಷ್ಟ. ಇನ್ನು ಮದುವೆಯಾದರೆ ಪತ್ನಿ, ಮಕ್ಕಳನ್ನು ಸಾಕುವುದು ಯಾರು ಎಂದು ಪ್ರಶ್ನಿಸುತ್ತಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.