ನವದೆಹಲಿ: ಭಾರತದ (India) ಮಹತ್ವಾಕಾಂಕ್ಷೆಯ ಆದಿತ್ಯ-ಎಲ್1 (Aditya -L1) ನೌಕೆ ಬಾಹ್ಯಾಕಾಶದಿಂದ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಸೆರೆಹಿಡಿದಿದೆ. ಈ ಚಿತ್ರವನ್ನು ಇಸ್ರೋ (ISRO) ಹಂಚಿಕೊಂಡಿದೆ.
ಆದಿತ್ಯ-ಎಲ್1 ಉದ್ದೇಶಿತ ಕಕ್ಷೆಯನ್ನು ತಲುಪಿದ ನಂತರ ದಿನಕ್ಕೆ 1,440 ಚಿತ್ರಗಳನ್ನು ಕಳುಹಿಸುವ ನಿರೀಕ್ಷೆಯಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಸಂಶೋಧನಾ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆದಿತ್ಯ-ಎಲ್1 ತೆರೆಯಲಿದೆ. ಈ ಮೂಲಕ ಹೆಚ್ಚು ಆಕರ್ಷಕ ಚಿತ್ರಗಳು ಮತ್ತು ಮೌಲ್ಯಯುತ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Aditya L1: ಎರಡನೇ ಕಕ್ಷೆ ಯಶಸ್ವಿಯಾಗಿ ಪ್ರವೇಶಿಸಿದ ಆದಿತ್ಯ ನೌಕೆ
ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಸೆಪ್ಟೆಂಬರ್ 2 ರಂದು ಆದಿತ್ಯ-ಎಲ್1ನ್ನು ಉಡಾವಣೆ ಮಾಡಲಾಯಿತು. ಇದು ಭಾರತದ ಮೊದಲ ಸೂರ್ಯನ ಅಧ್ಯಯನದ ಮಿಷನ್ ಆಗಿದೆ. ಇದು ಭೂಮಿಯ ಎರಡು ಸುತ್ತು ಸುತ್ತಿ ಮುಗಿಸಿದೆ. ಮುಂಬರುವ ದಿನಗಳಲ್ಲಿ ಭೂಮಿಯ ಕಕ್ಷೆಯಿಂದ ತನ್ನ ಗುರಿಯಾದ ಸೂರ್ಯನೆಡೆಗೆ ಸಾಗಲಿದೆ. ಸುಮಾರು 15,00,000 ಕಿಲೋಮೀಟರ್ ದೂರದಲ್ಲಿ ಇರಲಿದ್ದು ಅಲ್ಲಿಂದಲೇ ಸೂರ್ಯನನ್ನು ಅಧ್ಯಯನ ನಡೆಸಲಿದೆ.
ಆದಿತ್ಯ ಎಲ್-1 ಸೂರ್ಯನ ವರ್ಣಗೋಳ ಮತ್ತು ಕರೋನಾ ಸೇರಿದಂತೆ ವಿವಿಧ ಅಂಶಗಳ ಅಧ್ಯಯನಕ್ಕೆ ವಿನ್ಯಾಸಗೊಳಿಸಲಾದ ಏಳು ಪೆಲೋಡ್‍ಗಳನ್ನು ಒಯ್ಯುತ್ತಿದೆ. ಸೌರ ಸ್ಫೋಟ ಮತ್ತು ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪ್ರಭಾವದ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಈ ಮಿಷನ್ ನೇರವಾಗಿ ನೈಜ ಸಮಯದಲ್ಲಿ ಡೇಟಾವನ್ನು ಒದಗಿಸುವ ಶಕ್ತಿಹೊಂದಿದೆ. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ
Web Stories