Aditya-L1: ಆದಿತ್ಯ ನೌಕೆ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ – ಮುಂದಿನ ಹಂತ ‘ಭೂಮಿಯಿಂದ ಬೀಳ್ಕೊಡುಗೆ’

Public TV
1 Min Read
Aditya L1 2

ನವದೆಹಲಿ: ಸೂರ್ಯನ (Sun) ಬಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ಆದಿತ್ಯ-ಎಲ್1 (Aditya L1) ನೌಕೆಯನ್ನು ಮತ್ತೊಂದು ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.

ಗುರುವಾರ ಮಧ್ಯರಾತ್ರಿ 2 ಗಂಟೆಗೆ ಕಕ್ಷೆ ಬದಲಾವಣೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಆದಿತ್ಯ ನೌಕೆ ಈಗ ಭೂಮಿಯಿಂದ 256 ಕಿ.ಮೀ x 121973 ಕಿ.ಮೀ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Aditya-L1: ಮತ್ತೊಂದು ಎತ್ತರದ ಕಕ್ಷೆ ಸೇರಿದ ಆದಿತ್ಯ ನೌಕೆ – ಸೂರ್ಯನಿಗೆ ಇನ್ನಷ್ಟು ಹತ್ತಿರ

ಭೂಮಿಯ ಪರಿಭ್ರಮಣೆಯಲ್ಲಿರುವ ಆದಿತ್ಯ ಎಲ್‌1 ನೌಕೆಯನ್ನು ಭೂಮಿಯಿಂದ ಲಗ್ರಾಂಜಿಯನ್ ಪಾಯಿಂಟ್‌ 1 (ಎಲ್‌ 1) ಬಿಂದುವಿಗೆ ರವಾನಿಸುವ ಮುಂದಿನ ಪ್ರಕ್ರಿಯೆ ಸೆ.19 ರ ಮಧ್ಯರಾತ್ರಿ 2 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಚಂದ್ರಯಾನ-3 ಯಶಸ್ಸಿನ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆಯನ್ನು ಸೆ.2 ರಂದು ಉಡಾವಣೆ ಮಾಡಿತ್ತು. ನೌಕೆಯು ಸೆ.10 ರಂದು ಮೂರನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತ್ತು. ಇದನ್ನೂ ಓದಿ: Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article