– ಮೋದಿ, ಇಸ್ರೋ ಟೀಂಗೆ ಸಚಿವ ಧನ್ಯವಾದ
ಶ್ರೀಹರಿಕೋಟಾ: ಇಂದು ಬೆಳಗ್ಗೆ 11.50ಕ್ಕೆ ಆಂಧ್ರಪ್ರದೇಶದ (Andhrapradesh) ಶ್ರೀಹರಿಕೋಟಾದಿಂದ (Sriharikota) ಸೂರ್ಯ ಶಿಕಾರಿಗೆ ಹೊರಟ ಆದಿತ್ಯ ಎಲ್ 1 (Aditya L1) ಮಿಷನ್ ಯಶಸ್ವಿಯಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.
Advertisement
ಮಿಷನ್ ಯಶಸ್ವಿ ಬಗ್ಗೆ ಘೋಷಣೆ ಮಾಡಿದ ಅವರು, ಯಶಸ್ವಿಯಾಗಿ ಆದಿತ್ಯ ಎಲ್1 ಆರ್ಬಿಟ್ ಗೆ ಇನ್ ಸರ್ಟ್ ಮಾಡಲಾಗಿದೆ ಎಂದರು. ಇದೇ ವೇಳೆ ಆದಿತ್ಯ ಐ1 ಟೀಂಗೆ ಸೋಮನಾಥ್ (S Somanath) ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ
Advertisement
Advertisement
ಈ ಸಂದರ್ಭದಲ್ಲಿ ಚಂದ್ರಯಾನದ (Chandrayaan-3) ಬಗ್ಗೆ ಮಾಹಿತಿ ನೀಡಿದ ಸೋಮನಾಥ್, ಚಂದ್ರಯಾನದ ಲ್ಯಾಂಡರ್, ರೋವರ್ ಇನ್ನೂ ಯಶಸ್ವಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿವೆ. ಗುಡ್ ನ್ಯೂಸ್ ಅಂದ್ರೆ ರೋವರ್ 100 ಮೀಟರ್ ವರೆಗೂ ಸಂಚಾರ ಮಾಡಿದೆ. ಚಂದ್ರಯಾನದ ಅಧ್ಯಯನ ಯಶಸ್ವಿಯಾಗಿ ಮುಂದುವರಿದಿದೆ ಎಂದರು.
Advertisement
ಇತ್ತ ಸಚಿವ ಜೀತೇಂದ್ರ ಸಿಂಗ್ ಅವರು ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಧಾನಿ ಮೋದಿ ಹಾಗೂ ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದ ಹೇಳ್ತೀನಿ. ಇಸ್ರೋ ವಿಜ್ಞಾನಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಚಂದ್ರಯಾನ ಯಶಸ್ವಿ ಬಳಿಕ ಆದಿತ್ಯ ಎಲ್ 1 ಯಶಸ್ವಿಯಾಗಿದೆ. ಈ ಸಾಧನೆ ವಿಶ್ವದ ಗಮನ ಸೆಳೆದಿದೆ. ಆದಿತ್ಯ ಎಲ್ 1ಗೆ ಉಪಕರಣ ಸಿದ್ಧ ಮಾಡಿಕೊಂಡ ವಿವಿಧ ಸಂಸ್ಥೆಗಳಿಗೆ ಧನ್ಯವಾದಗಳು ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೂರ್ಯಯಾನ ಯಶಸ್ವಿಯಾಗುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದ್ದು, ಭಾರತೀಯರ ಕನಸು ನನಸಾಗಿದೆ. ಇನ್ನು ಮುಂದೆ ಆದಿತ್ಯ ಎಲ್ 1 125 ದಿನ ತನ್ನ ಜರ್ನಿ ನಡೆಸಲಿದೆ.
Web Stories