– ಸೂರ್ಯಯಾನದಿಂದ ಲಾಭವೇನು?
ನವದೆಹಲಿ: ಚಂದ್ರಯಾನ-3 ರ ಯಶಸ್ಸಿನ ನಂತರ ಭಾರತವು ಸೂರ್ಯಯಾನ ಆದಿತ್ಯ ಎಲ್-1 (Aditya L-1) ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇಂದಿನಿಂದ ಆದಿತ್ಯ-ಎಲ್1 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಬೆಳಗ್ಗೆ 11:50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ನೌಕೆ ಉಡಾವಣೆಯಾಗಲಿದೆ.
Advertisement
ಇಸ್ರೋ (ISRO) ಈ ಹೊಸ ಯೋಜನೆ ಬಗೆಗೆ ಕೇವಲ ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ಆಸಕ್ತಿ ಹೆಚ್ಚಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ. ಸಾಕಷ್ಟು ಸವಾಲುಗಳ ಮಧ್ಯೆ ಉಡಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿಗೆ ಎಂದು ಅವರು ಹೇಳಿದ್ದಾರೆ.
Advertisement
Advertisement
ಮಾಹಿತಿಗಳ ಪ್ರಕಾರ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಸೌರ ಕರೋನ (ಸೂರ್ಯನ ಹೊರಗಿನ ಪದರಗಳು) ದೂರದ ವೀಕ್ಷಣೆಗಾಗಿ ಮತ್ತು ಎಲ್-1ನಲ್ಲಿ (ಲಾಗ್ರಾಂಜಿಯನ್ ಪಾಯಿಂಟ್ -1) ಸೌರ ಮಾರುತದ ಸ್ಥಳ ವೀಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲ್-1 ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿದ್ದು, ಇದೊಂದು ಕಷ್ಟಕರ ಯೋಜನೆಯೂ ಆಗಿದೆ.
Advertisement
ಏನಿದು ಎಲ್1 ಪಾಯಿಂಟ್?
ಸೂರ್ಯನ ಗುರುತ್ವಾಕರ್ಷಣೆ ಹಾಗೂ ಭೂಮಿಯ ಗುರುತ್ವಾಕರ್ಷಣೆ ಸಮ ಪ್ರಮಾಣದಲ್ಲಿ ಇರುವ 5 ಸ್ಥಳಗಳು ಭೂಮಿಯ ಕಕ್ಷೆಯಲ್ಲಿ ಸಿಗುತ್ತವೆ. ಇದನ್ನು ಲಾಗ್ರಾಂಜಿಯನ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಈ ಪೈಕಿ ಲಾಗ್ರಾಂಜಿಯನ್ ಪಾಯಿಂಟ್ 1ರಲ್ಲಿ ಭಾರತದ ಸೌರ ಅಧ್ಯಯನ ಉಪಗ್ರಹ ನಿಲ್ಲಲಿದೆ. ಬಾಹ್ಯಾಕಾಶಕ್ಕೆ ಕಳುಹಿಸಲಾಗುವ ವಸ್ತುಗಳು ಸ್ಥಳದಲ್ಲಿಯೇ ಇರುವಂತೆ ಮಾಡಲಾಗುತ್ತದೆ
ಈ ಮಿಷನ್‌ನಿಂದ ಏನು ಪ್ರಯೋಜನ?
ಇಸ್ರೋ ಪ್ರಕಾರ, ಸೂರ್ಯನು ನಮಗೆ ಹತ್ತಿರದ ನಕ್ಷತ್ರ. ಇದು ನಕ್ಷತ್ರಗಳ ಅಧ್ಯಯನದಲ್ಲಿ ನಮಗೆ ಹೆಚ್ಚು ಸಹಾಯ ಮಾಡುತ್ತದೆ. ಇದರಿಂದ ಪಡೆದ ಮಾಹಿತಿಯು ಇತರ ನಕ್ಷತ್ರಗಳು, ನಮ್ಮ ನಕ್ಷತ್ರಪುಂಜ ಮತ್ತು ಅನೇಕ ರಹಸ್ಯಗಳು ಮತ್ತು ಖಗೋಳಶಾಸ್ತ್ರದ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೂರ್ಯನು ನಮ್ಮ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿದ್ದಾನೆ. ಆದಿತ್ಯ ಎಲ್-1 ಈ ದೂರದಲ್ಲಿ ಕೇವಲ ಒಂದು ಪ್ರತಿಶತವನ್ನು ಮಾತ್ರ ಕ್ರಮಿಸುತ್ತಿದೆ. ಇದು ಸೂರ್ಯನ ಬಗ್ಗೆ ಅಂತಹ ಅನೇಕ ಮಾಹಿತಿಯನ್ನು ನೀಡುತ್ತದೆ. 4 ತಿಂಗಳುಗಳ ಕಾಲ ಉಪಗ್ರಹ ಕ್ರಮಿಸಿ, ಕಾಯಾಚರಣೆ ನಡೆಸಲಿದೆ. ಇದು 5 ವರ್ಷ ಆಯಸ್ಸನ್ನು ಹೊಂದಿದೆ.
ಆದಿತ್ಯ ಎಲ್-1ನಲ್ಲಿ ಯಾವ ಸಲಕರಣೆಗಳನ್ನು ಬಳಸಲಾಗಿದೆ?
ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC): ಈ ಸಾಧನವನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಬೆಂಗಳೂರು) ಅಭಿವೃದ್ಧಿಪಡಿಸಿದೆ. ಇದು ಸೂರ್ಯನ ಕರೋನಾ ಮತ್ತು ಅದು ಹೊರ ಸೂಸುವ ಕಿರಣಗಳಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡುತ್ತದೆ.
ಸೌರ ಅಲ್ಟ್ರಾ-ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT): ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ-ವಿಶ್ವವಿದ್ಯಾಲಯದಿಂದ (ಪುಣೆ) ನಿರ್ಮಿಸಲಾಗಿದೆ. ಇದು ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ. ಇವುಗಳು ನೇರಳಾತೀತ ವ್ಯಾಪ್ತಿಯಲ್ಲಿರುವ ಛಾಯಾಚಿತ್ರಗಳಾಗಿವೆ. ಈ ಬೆಳಕು ಬಹುತೇಕ ಅಗೋಚರವಾಗಿರುತ್ತದೆ. ಇದನ್ನೂ ಓದಿ: One Nation, One Election – ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆ
Solex ಮತ್ತು Hal1OS: ಸೋಲಾರ್ ಲೋ-ಎನರ್ಜಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಸೋಲೆಕ್ಸ್) ಮತ್ತು ಹೈ-ಎನರ್ಜಿ ಎಲ್-1 ಆರ್ಬಿಟಿಂಗ್ ಸೂರ್ಯನ ಎಕ್ಸ್- ಕಿರಣಗಳ ಅಧ್ಯಯನ ಮಾಡಲಿವೆ. ಮ್ಯಾಗ್ನೆಟೋಮೀಟರ್ (MAG) ಅನ್ನು ಬೆಂಗಳೂರಿನ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ ಲ್ಯಾಬೋರೇಟರಿ (ಬೆಂಗಳೂರು) ಅಭಿವೃದ್ಧಿಪಡಿಸಿದೆ. ಇದು ಎಲ್-1 ಕಕ್ಷೆಯ ಸುತ್ತ ಇರುವ ಅಂತರಗ್ರಹ ಕಾಂತಕ್ಷೇತ್ರವನ್ನು ಅಳೆಯುತ್ತದೆ.
ಆಸ್ಪೆಕ್ಸ್ ಮತ್ತು ಪಾಪಾ: ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯವು ಆದಿತ್ಯ ಸೌರ ಮಾರುತ ಕಣದ ಪ್ರಯೋಗವನ್ನು (SPEX) ಅಭಿವೃದ್ಧಿಪಡಿಸಿದೆ ಮತ್ತು ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ, ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಆದಿತ್ಯ (PAPA) ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್ ಅನ್ನು ಅಭಿವೃದ್ಧಿಪಡಿಸಿದೆ. ಸೌರ ಮಾರುತವನ್ನು ಅಧ್ಯಯನ ಮಾಡುವುದು ಮತ್ತು ಶಕ್ತಿಯ ವಿತರಣೆಯನ್ನು ಅರ್ಥಮಾಡಿಕೊಳ್ಳುವುದು ಇವುಗಳ ಕೆಲಸವಾಗಿದೆ. ಇದನ್ನೂ ಓದಿ: ಎಲ್ಲಾ ಸಚಿವರಿಗೆ ಕಾರು ಭಾಗ್ಯ – 33 ಮಂದಿಗೆ ಸಿಗಲಿದೆ ಇನ್ನೋವಾ ಹೈಕ್ರಾಸ್ ಹೈಬ್ರಿಡ್
Web Stories