ಮುಂಬೈ: ಬಹು ನಿರೀಕ್ಷಿತ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಂಜಯ್ ದತ್ ಜೀವನಾಧಾರಿತವಾದ ಈ ಚಿತ್ರದಲ್ಲಿ ಸಂಜಯ್ ಪಾತ್ರ ಮಾಡಿರುವ ರಣ್‍ಬೀರ್ ಕಪೂರ್ ನಟನೆಯ ಬಗ್ಗೆ ಎಲ್ಲೆಡೆ ಅದ್ಭುತ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದರಲ್ಲಿನ ಮುಖ್ಯವಾದ ಇತರೆ ಪಾತ್ರಗಳೂ ಕೂಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
ಅದರಲ್ಲಿಯೂ ವಿಶೇಷವಾಗಿ ಸಂಜಯ್ ದತ್ ತಂಗಿ ಪ್ರಿಯಾ ಪಾತ್ರವನ್ನೂ ಕೂಡಾ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಪಾತ್ರದಲ್ಲಿ ನಟಿಸಿರುವಾಕೆ ಅದಿತಿ ಸಿಯಾ. ರಣ್‍ಬೀರ್ ಕಪೂರ್ ಜೊತೆ ನಟಿಸಿದ್ದಕ್ಕಾಗಿ ಖುಷಿಗೊಂಡಿರುವ ಆದಿತಿ ಆತನ ನಟನೆ ಮತ್ತು ವ್ಯಕ್ತಿತ್ವವನ್ನು ಕೊಂಡಾಡಿದ್ದಾಳೆ!
ತಾನೋರ್ವ ಸ್ಟಾರ್ ನಟ ಎಂಬ ಸಣ್ಣ ಅಹಂ ಇಲ್ಲದೆ ಓರ್ವ ಕಲಾವಿದನಾಗಿ ಮಾತ್ರವೇ ವರ್ತಿಸುವ ರಣ್‍ಬೀರ್ ಒಬ್ಬ ಒಳ್ಳೆತನದ ವ್ಯಕ್ತಿ ಅಂದಿರುವ ಅದಿತಿ, ಆತ ಒನ್ ಟೇಕ್ ಸ್ಪೆಷಲಿಸ್ಟ್ ಅಂತಲೂ ಹೇಳಿಕೊಂಡಿದ್ದಾಳೆ. ರಣ್‍ಬೀರ್ ಪ್ರತೀ ದೃಶ್ಯಗಳನ್ನೂ ಒಂದೇ ಟೇಕಿಗೆ ಓಕೆ ಮಾಡಿಸಿಕೊಳ್ಳುತ್ತಿದ್ದುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾಳೆ.
ಸಂಜಯ್ ದತ್ ತಂಗಿ ಪ್ರಿಯಾ ಪಾತ್ರಕ್ಕೆ ನಿರ್ದೇಶಕರು ಸಾಕಷ್ಟು ಹುಡುಕಾಟ ನಡೆಸಿ ಕಡೆಗೆ ಅದಿತಿಯನ್ನು ಆಯ್ಕೆ ಮಾಡಿದ್ದರು. ಆದರೆ ಕಥೆಯನ್ನಷ್ಟೇ ಕೇಳಿಕೊಂಡಿದ್ದ ಅದಿತಿ ಪ್ರಿಯಾಳ ಹಾವಭಾವಗಳನ್ನು ನೇರವಾಗಿ ಅಭ್ಯಸಿಸಿರಲಿಲ್ಲವಂತೆ. ಆದರೂ ಕೂಡಾ ಎಲ್ಲರೂ ಮೆಚ್ಚುವಂತೆ ಆ ಪಾತ್ರವನ್ನು ಮಾಡಲು ರಣ್‍ಬೀರ್ ಕಪೂರ್ ಕೊಟ್ಟ ಸಲಹೆಗಳೇ ಕಾರಣ ಎಂದೂ ಅದಿತಿ ಹೇಳಿಕೊಂಡಿದ್ದಾಳೆ.