ಮುಂಬೈ: ನಾನು ಚಿತ್ರರಂಗಕ್ಕೆ ಬಂದಿದ್ದೆ ಮಣಿರತ್ನಂ ಸಿನಿಮಾಗಳಲ್ಲಿ ನಾಯಕಿಯಾಗಲು ಎಂದು ಪ್ಯಾನ್ ಇಂಡಿಯಾ ನಟಿ ಅದಿತಿ ರಾವ್ ಹೈದರಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅದಿತಿ ತಮ್ಮ ಸಿನಿ ಜರ್ನಿ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನಾನು ಹಲವು ಭಾಷೆಗಳಲ್ಲಿ ನಟಿಸುವುದರಿಂದ ನನಗೆ ಕೆಲವೊಮ್ಮೆ ಗೊಂದಲವಾಗುತ್ತೆ. ನಾನು ಯಾವ ಭಾಷೆಯ ಸಿನಿಮಾ ಮಾಡಲು ಸೆಟ್ ಗೆ ಹೋಗುತ್ತೇನೂ ಆ ಭಾಷೆ ನಡುವೆ ನಾನು ಬೆರೆಯುತ್ತೇನೆ. ನಾನು ತೆಲುಗು ಮಾತನಾಡಬೇಕು ಎಂದುಕೊಂಡಾಗ, ನಾನು ತಮಿಳು ಮಾತನಾಡಲು ಪ್ರಾರಂಭಿಸುತ್ತೇನೆ. ಶೂಟಿಂಗ್ ಸೆಟ್ ಗೆ ಹೋದಾಗ ನಾನು ಆ ಭಾಷೆಯಲ್ಲಿ ಮಾತನಾಡುತ್ತೇನೆ. ನಾನು ಇದನ್ನು ನಿಜವಾಗಿಯೂ ಆನಂದಿಸುತ್ತೇನೆ ಎಂದು ನಗುತ್ತಾ ಉತ್ತರಿಸಿದರು. ಇದನ್ನೂ ಓದಿ: ತಂದೆಯ `ಧಡ್ಕನ್’ ಸಿನಿಮಾ ರಿಮೇಕ್‍ನಲ್ಲಿ ನಟಿಸಲು ಬಯಸುತ್ತೇನೆ: ಅಹಾನ್ ಶೆಟ್ಟಿ
Advertisement
View this post on Instagram
Advertisement
ಅದಿತಿ ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ ಮತ್ತು ಸುಧೀರ್ ಮಿಶ್ರಾ ಅವರಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಚಿತ್ರರಂಗಕ್ಕೆ ಬಂದಿದ್ದೆ ಮಣಿರತ್ನಂ ಸಿನಿಮಾಗಳಲ್ಲಿ ನಾಯಕಿಯಾಗಲು. ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸಗಿತ್ತು. ಮುಂದೊಂದು ದಿನ ಅವನೊಂದಿಗೆ ಕೆಲಸ ಮಾಡುವ ಆಸೆಯಿಂದ ಸಿನಿಮಾ ಪ್ರವೇಶಿಸಿದ್ದೆ ಎಂದು ಬಹಿರಂಗಪಡಿಸಿದರು.
Advertisement
ನಾನು ಮಣಿರತ್ನಂ ಸಿನಿಮಾದಲ್ಲಿ ನಾಯಕಿಯಾಗಬೇಕೆಂದು ಬಯಸಿದ್ದೆ ಮತ್ತು ಅದೇ ನನ್ನನ್ನು ಚಲನಚಿತ್ರಗಳಿಗೆ ಸೇರುವಂತೆ ಮಾಡಿತು. ಆದರೆ ಇದು ಕೇವಲ ಕನಸು. ಆದರೂ ನಾನು ಇದನ್ನು ಮಾಡಲು ಬಯಸಿದೆ. ನಾನು ಮೊದಲು ಮಣಿ ಸರ್ ಅವರ ಮೊದಲ ಭಾಷೆ ಕಲಿತೆ. ನನ್ನ ಶ್ರಮಕ್ಕೆ ತಕ್ಕಂತೆ ನಾನು ಅವರ ಜೊತೆ ಕೆಲಸ ಮಾಡಿದೆ ಎಂದು ಖುಷಿ ವ್ಯಕ್ತಪಡಿಸಿದರು.
Advertisement
ನಾನು 2010-11 ರ ಸುಮಾರಿಗೆ ಮುಂಬೈಗೆ ಹೋಗಿ ಹಿಂದಿ ಸಿನಿಮಾ ಮಾಡಲು ಪ್ರಾರಂಭಿಸಿದೆ. ನಾನು ಸಹ ತುಂಬಾ ಎಡವುತ್ತಿದ್ದೆ. ಆದರೆ ಎಲ್ಲದಕ್ಕಿಂತ ನನ್ನ ಕನಸು ನನಗೆ ತುಂಬಾ ಮುಖ್ಯವಾಗಿತ್ತು. ಅಂತಿಮವಾಗಿ ನಾನು 2016 ರಲ್ಲಿ ಮಣಿ ಸರ್ ಅವರೊಂದಿಗೆ ಕೆಲಸ ಮಾಡಿದೆ ಎಂದು ನಗುತ್ತಾ ಹೇಳಿದರು.
ನಾನು ಮೊದಲ ದಿನ ಚಿತ್ರದ ಸೆಟ್‍ಗೆ ಕಾಲಿಟ್ಟಾಗ, ನನಗೆ ಏನೂ ತಿಳಿದಿರಲಿಲ್ಲ. ನಾನು ನಟನೆಯನ್ನು ಆನಂದಿಸುತ್ತಿದ್ದೆ. ಏಕೆಂದರೆ ನಾವು ಸೆಟ್‍ನಲ್ಲಿ ಇದ್ದಾಗ ನಮಗೆ ಪ್ರತಿಯೊಂದು ಅಂಶವು ಹೊಸದನ್ನು ಕಲಿಸುತ್ತಿರುತ್ತೆ. ನಾವು ಎಲ್ಲವನ್ನು ಸರಿಯಾಗಿ ನೋಡಿ ಕಲಿಯಬೇಕು ಎಂದು ವಿವರಿಸಿದರು. ಇದನ್ನೂ ಓದಿ: ‘ನಾವು ಬಿಗ್‍ಬಿ ಅಭಿಮಾನಿಗಳು’ ಎಂದ ಸುಜೋಯ್ ಘೋಷ್ – ಕುರ್ತಾ ಬಗ್ಗೆ ಪ್ರಶ್ನಿಸಿದ ಅಭಿಷೇಕ್ ಬಚ್ಚನ್
View this post on Instagram
ಅದಿತಿ ಇಲ್ಲಿಯವರೆಗೆ ಮಣಿರತ್ನಂ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವು ‘ಕಾಟ್ರು ವೆಲಿಯಿದೈ'(2017) ಮತ್ತು ‘ಚೆಕ್ಕ ಚಿವಂತ ವಾನಂ'(2018). 2021 ರಲ್ಲಿ ದಿ ಗರ್ಲ್ ಆನ್ ದಿ ಟ್ರೈನ್, ಸರ್ದಾರ್ ಕಾ ಗ್ರ್ಯಾಂಡ್‍ಸನ್, ಮಹಾ ಸಮುದ್ರಂ(ತೆಲುಗು) ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪ್ಯಾನ್-ಇಂಡಿಯಾ ನಟಿ ಅದಿತಿ ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಇತರ ಭಾಷೆಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಆಕೆಯ ಜನಪ್ರಿಯ ಹಿಂದಿ ಸಿನಿಮಾ ‘ಯೇ ಸಾಲಿ ಜಿಂದಗಿ’, ‘ವಜೀರ್’, ದಕ್ಷಿಣ ಭಾರತದಲ್ಲಿ ‘ಸಮ್ಮೋಹನಂ’, ‘ವಿ’ ಮತ್ತು ‘ಸೈಕೋ’ಗಳನ್ನು ಸಿನಿಮಾಗಳಲ್ಲಿ ನಟಿಸಿದ್ದಾರೆ.