ಬಾಲಿವುಡ್ ನಟಿ ಅದಿತಿ ರಾವ್ ಹೈದರಿ(Aditi Rao Hydari), ಕಾಲಿವುಡ್ ನಟ ಸಿದ್ಧಾರ್ಥ್ (Siddarth) ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಸಿದ್ಧಾರ್ಥ್ ಜೊತೆಗಿನ ಖಾಸಗಿ ಫೋಟೋ ಹಂಚಿಕೊಂಡು ಹೊಸ ವರ್ಷದಂದು ಮದುವೆ (Wedding) ಬಗ್ಗೆ ಸುಳಿವು ನೀಡಿದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡುತ್ತಿದೆ.
ನ್ಯೂ ಇಯರ್ ಸಂಭ್ರಮವನ್ನು ನಟಿ ಅದಿತಿ- ಸಿದ್ಧಾರ್ಥ್ ಜೋಡಿ ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಈ ಕುರಿತ ಇಬ್ಬರೂ ಕೂಡ ಚೆಂದದ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಈ ಮೂಲಕ ಎಂಗೇಜ್ ಆಗಿರೋದು ಖಚಿತವಾಗಿದೆ. ಫೋಟೋ ಶೇರ್ ಮಾಡ್ತಿದ್ದಂತೆ ಮದುವೆ ಯಾವಾಗ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್
View this post on Instagram
2021ರಲ್ಲಿ ‘ಮಹಾ ಸಮುದ್ರಂ’ ಸಿನಿಮಾ ವೇಳೆ, ಅದಿತಿ- ಸಿದ್ಧಾರ್ಥ್ ಪರಿಚಿತರಾದರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಸಾಕಷ್ಟು ಪಾರ್ಟಿ ಮತ್ತು ಸೆಲೆಬ್ರಿಟಿ ಮದುವೆ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿಯೇ ಹೋಗುವ ಮೂಲಕ ಹೈಲೆಟ್ ಆದರು.
ಇಬ್ಬರೂ ಪ್ರೀತಿ ಬಗ್ಗೆ ಅಧಿಕೃತವಾಗಿ ಹೇಳದೇ ಇದ್ದರೂ ಹೊಸ ಫೋಟೋ ಶೇರ್ ಮಾಡಿ ಮದುವೆ ಬಗ್ಗೆ ಪರೋಕ್ಷವಾಗಿ ಹೇಳಿದ್ರಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿದೆ. ಸದ್ಯದಲ್ಲೇ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಕಾದುನೋಡಬೇಕಿದೆ.