ಬೆಂಗಳೂರು: ಅಪ್ಪು ಅವರ ಸಾವು ನಿಜ ಎಂದು ಅನಿಸುತ್ತಿಲ್ಲ. ಅವರ ನಗು ಮುಖ ಮಾತ್ರ ಕಣ್ಣ ಮುಂದಿದೆ ಎಂದು ನಟಿ ಅದಿತಿ ಪ್ರಭುದೇವ ಪುನೀತ್ ರಾಜ್ಕುಮಾರ್ ನೆನೆದು ಕಣ್ಣೀರಿಟ್ಟಿದ್ದಾರೆ.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅದಿತಿ ಪ್ರಭುದೇವ, ನನಗೆ ಏನು ಮಾತನಾಡಬೇಕೆಂದು ಅನಿಸುತ್ತಿಲ್ಲ. ಅವರ ಸಾವು ನಿಜ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ. ಅವರ ನಗು ಮುಖವನ್ನು ನೋಡಿರುವ ನಾನು ಅವರ ನಗುವಿಲ್ಲದ ಮುಖ ನೋಡಿ ದುಂಬಾ ದುಃಖ ತರಿಸಿದೆ ಎಂದು ದುಃಖಿತರಾದರು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ
Advertisement
Advertisement
ನನಗೆ ಏನು ಮಾತನಾಡಬೇಕೆಂದು ಗೊತ್ತಾಗುತ್ತಿಲ್ಲ. ಅವರ ಮುಖದಲ್ಲಿ ಮೊದಲ ಬಾರಿಗೆ ನಗು ಮಾಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಸಾವಿನ ಫೋಟೋ ಯಾರು ಕೂಡ ಪೋಸ್ಟ್ ಮಾಡಬೇಡಿ ಅವರು ನಗುತ್ತಿರುವ ಫೋಟೋ ಮಾತ್ರ ಪೋಸ್ಟ್ ಮಾಡಿ ಇದು ನನ್ನ ಮನವಿ ಎಂದು ಮರುಗಿದರು. ಇದನ್ನೂ ಓದಿ: ಅಪ್ಪು ಉಸಿರು ನಿಲ್ಲೋ ಕ್ಷಣದಲ್ಲಿ ಹೇಗಿದ್ರು, ಕೊನೆಯದಾಗಿ ಮಾತಾಡಿದ್ದೇನು? – ಕೊನೆ ಕ್ಷಣ ಬಿಚ್ಚಿಟ್ಟ ಡಾ.ರಮಣ ರಾವ್
Advertisement