ಯುಗಾದಿಯಂದು ಸಿಹಿಸುದ್ದಿ- ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಪ್ರಭುದೇವ

Public TV
1 Min Read
aditi

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಯುಗಾದಿಯಂದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮುದ್ದಾದ ಹೆಣ್ಣು ಮಗುವಿಗೆ (Baby Girl) ನಟಿ ಜನ್ಮ ನೀಡಿದ್ದಾರೆ. ಯುಗಾದಿ ಹಬ್ಬದಂದು ಮಹಾಲಕ್ಷ್ಮಿ ಆಗಮನದ ಬಗ್ಗೆ ನಟಿ ಗುಡ್ ನ್ಯೂಸ್ ನೀಡಿದ್ದಾರೆ.

aditi prabhudeva

ಏ.4ರಂದು ನಟಿ ಅದಿತಿ ಪ್ರಭುದೇವ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಯುಗಾದಿ ಹಬ್ಬದಂದು ಮಗಳ ಆಗಮನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅದಿತಿ ಮಾಹಿತಿ ನೀಡಿದ್ದಾರೆ. ಅದಿತಿ ಸಂತಸದ ಸುದ್ದಿ ಹೇಳುತ್ತಿದ್ದಂತೆ ಪತಿ ಯಶಸ್‌ ಕೂಡ ರಿಪ್ಲೈ ಮಾಡಿದ್ದಾರೆ. ನನ್ನ ಜೀವದ ಗೆಳತಿ ಅದಿತಿ, ನಿನ್ನ ಹಾಗೆಯೇ ನಮ್ಮ ಮಗಳು ಎಂದು ಕಾಮೆಂಟ್‌ ಮಾಡಿದ್ದಾರೆ. ಇದೀಗ ನಟಿಗೆ ಅಭಿಮಾನಿಗಳು, ಸಿನಿಮಾ ತಾರೆಯರು ಶುಭಕೋರುತ್ತಿದ್ದಾರೆ.

ಅಂದಹಾಗೆ ಇತ್ತೀಚೆಗೆ ಸೀಮಂತ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ಜರುಗಿತ್ತು. ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಕೊನೆಗೂ ನನ್ನ ಪುಟ್ಟ ನೆರವೇರಿದೆ ಎಂದು ನಟಿ ಅದಿತಿ ಸಂಭ್ರಮಿಸಿದ್ದರು.

aditi prabhudeva

ಜನವರಿಯಲ್ಲಿ ನಟಿ ಅದಿತಿ ಅವರು ಅಮ್ಮನಾಗುತ್ತಿರುವ ಸುದ್ದಿ ತಿಳಿಸಿದ್ದರು. ವಿಶೇಷ ಫೋಟೋಶೂಟ್ ಮಾಡಿಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇದನ್ನೂ ಓದಿ:ಬನಾರಸ್ ಹುಡುಗನ ‘ಕಲ್ಟ್’: ಝೈದ್ ಖಾನ್ ಚಿತ್ರಕ್ಕೆ ಇದೆಂಥ ಟೈಟಲ್?

ಕೊಡಗು ಮೂಲದ ಬ್ಯುಸಿನೆಸ್ ಮ್ಯಾನ್ ಯಶಸ್ ಪಾಟ್ಲಾ ಜೊತೆ 2022ರಲ್ಲಿ ಅದಿತಿ ಪ್ರಭುದೇವ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ನಟಿ ಅದ್ಧೂರಿಯಾಗಿ ಮದುವೆಯಾದರು.

Share This Article