ಬಿಗ್ ಬಾಸ್ ಮನೆಗೆ (Bigg Boss Kannada 11) ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿದ್ದ ಹನುಮಂತಗೆ (Hanumantha) ಎದುರಾಳಿಗಳಿಗೆ ಸೈಲೆಂಟ್ ಆಗಿ ಠಕ್ಕರ್ ಕೊಟ್ಟಿದ್ದಾರೆ. ಫಿನಾಲೆ ಟಿಕೆಟ್ ಪಡೆದು ಡೈರೆಕ್ಟ್ ಆಗಿ ಕೊನೆಯ ವಾರಕ್ಕೆ ಹೋಗಿದ್ದಾರೆ. ಮನೆಗೆ ಗೆಸ್ಟ್ ಆಗಿ ಬಂದಿದ್ದ ನಟಿ ಅದಿತಿ ಪ್ರಭುದೇವ ಮತ್ತು ಶರಣ್ ಅವರು ಫಿನಾಲೆ ಟಿಕೆಟ್ ಅನ್ನು ಹನುಮಂತಗೆ ವಿತರಿಸಿದ್ದಾರೆ. ಈ ವೇಳೆ ಹನುಮಂತನ ಮನಸ್ಸು ಬೆಳ್ಳಗಿದೆ ಎಂದು ನಟಿ ಕೊಂಡಾಡಿದ್ದಾರೆ. ಇದನ್ನೂ ಓದಿ:ಯಾವುದೇ ಹಾಡನ್ನು ಕದ್ದಿಲ್ಲ, ಕಾನೂನು ಸಮರಕ್ಕೆ ಸಿದ್ಧ: ಚಂದನ್ ಶೆಟ್ಟಿ
ಹಗ್ಗದಿಂದ ಮಾಡಿದ ದೊಡ್ಡ ಜಾಲದ ಮಾದರಿಯನ್ನು ಗಾರ್ಡನ್ ಏರಿಯಾದಲ್ಲಿ ನಿಲ್ಲಿಸಲಾಗಿತ್ತು. ಇದರ ಮೇಲೆ ವಿವಿಧ ಕೀ ಇರುತ್ತದೆ. ಈ ಕೀನ ತೆಗೆದುಕೊಂಡ ಸ್ಪರ್ಧಿ ಮರಳಿ ಬಂದು ಕೀ ಮೂಲಕ ಪೆಟ್ಟಿಗೆ ತೆಗೆಯಬೇಕು. ತೆಗೆದ ಬಳಿಕ ಆ ಬಾಕ್ಸ್‌ನಲ್ಲಿರುವ ಬಾವುಟವನ್ನು ಹಿಡಿದು ಮತ್ತೆ ಹಗ್ಗದ ಜಾಲವನ್ನು ಏರಿ, ಅದರ ಮೇಲಿರುವ ಒಂದು ಹಲಗೆಯ ಮೇಲೆ ನಿಂತು ಬಾವುಟವನ್ನು ಅಲ್ಲಿರುವ ಪೈಪ್‌ಗೆ ಸಿಕ್ಕಿಸಿ ಬಿಗ್ ಬಾಸ್ ಎಂದು ಕೂಗಿ ಹೇಳಬೇಕು. ಭವ್ಯಾ, ರಜತ್, ತ್ರಿವಿಕ್ರಮ್‌ಗಿಂತ ಮುನ್ನ ಹನುಮಂತ ಆಟ ಪೂರ್ಣಗೊಳಿಸಿದ್ದಾರೆ. ಹನುಮಂತ ಅವರು ಎರಡು ನಿಮಿಷ 27 ಸೆಕೆಂಡ್‌ನಲ್ಲಿ ಟಾಸ್ಕ್ ಪೂರ್ಣಗೊಳಿಸಿ ಭೇಷ್ ಎನಿಸಿಕೊಂಡರು. ಈ ಮೂಲಕ ಟಿಕೆಟ್ ಟು ಫಿನಾಲೆ ಟಿಕೆಟ್‌ನ ತಮ್ಮದಾಗಿಸಿಕೊಂಡರು.
ಈ ಟಿಕೆಟ್ ನೀಡೋಕೆ ಶರಣ್ ಹಾಗೂ ಅದಿತಿ ಬಂದಿದ್ದರು. ಟಿಕೆಟ್ ನೀಡಿದ ಬಳಿಕ ಮನೆಯಿಂದ ತೆರಳುವ ಸಮಯದಲ್ಲಿ ಹನುಮಂತ ಹಾಗೂ ಅದಿತಿ (Aditi Prabhudeva) ಪ್ರತ್ಯೇಕವಾಗಿ ಹೋಗಿ ನಿಂತರು. ಈ ವೇಳೆ, ಅದಿತಿ ಹನುಮಂತನ ಕೈ ಸಹಾಯದಿಂದ ಹಾರ್ಟ್ ಮಾಡಲು ಹೋದರು. ಆಗ ಹನುಮಂತಗೆ ಅದಿತಿ ಕೈ ಬಣ್ಣ ನೋಡಿ,”ನನ್ನ ಕೈ ಬಣ್ಣ ಕಪ್ಪಗಿದೆ” ಎಂದು ಹೇಳಿದರು. ಕೂಡಲೇ ಅದಿತಿ,” ನಿಮ್ಮ ಮನಸ್ಸು ತುಂಬಾ ಬೆಳ್ಳಗಿದೆ” ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ಹನುಮಂತ ನಾಚಿ ನೀರಾದರು. ಅದಿತಿ ಹೇಳಿದ ಈ ಮಾತಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.