ಓಂ ರೌತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾ ಶುರುವಾದಾಗಿನಿಂದ ಒಂದಲ್ಲಾ ಒಂದು ವಿವಾದಗಳಿಂದ ಸದ್ದು ಮಾಡುತ್ತಲೇ ಇದೆ. ಸದ್ಯ ಸೀತೆ ಆಗಿ ನಟಿಸಿರುವ ಕೃತಿ ಸನೋನ್ (Kriti Sanon) ಲುಕ್‌ನ್ನು ಆದಿಪುರುಷ್ ಟೀಂ ರಿವೀಲ್ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?
ಪ್ರಭಾಸ್- ಕೃತಿ ಸನೋನ್ ನಟನೆಯ ‘ಆದಿಪುರುಷ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಹಿಂದೆ ಟೀಸರ್- ಪೋಸ್ಟರ್‌ಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ ಚಿತ್ರದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಆದರೆ ಇದೀಗ ತಪ್ಪಿಲ್ಲದೇ ಸೀತಾ ಪಾತ್ರಧಾರಿ ಕೃತಿ ಸನೂನ್ ಫಸ್ಟ್ ಲುಕ್‌ನ ರಿವೀಲ್ ಮಾಡಲಾಗಿದೆ.
View this post on Instagram
ಸೀತೆ ಬೈತಲೆಗೆ ಕುಂಕುಮ, ಕೈಯಲ್ಲಿ ಬಳೆ ಧರಿಸಿ ಸುಂದರವಾಗಿ ಸೀತೆ ಲುಕ್‌ನಲ್ಲಿ ಕೃತಿ ಸನೋನ್ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಸೀತೆಯ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲಿಗೆ ಪ್ರಭಾಸ್ ಶ್ರೀರಾಮನಾಗಿ ಬಿಲ್ಲು ಬಾಣ ಹಿಡಿದು ನಿಂತಿರುವ ಚಿತ್ರ ಕಾಣುತ್ತದೆ. ನಂತರ ನಿಧಾನವಾಗಿ ಸೀತಾ ಮಾತೆಯ ದರ್ಶನವಾಗುತ್ತದೆ. ಸೀತಾ ಮಾತೆಯ ಎರಡು ಪೋಸ್ಟರ್ ಚಿತ್ರತಂಡ ಹಂಚಿಕೊಂಡಿದೆ.
View this post on Instagram
400 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನ ’ಆದಿಪುರುಷ್’ ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ (Saif Ali Khan) ನಟಿಸಿದ್ದಾರೆ. ಜೂನ್ 16ರಂದು ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ‘ಆದಿಪುರುಷ್’ ಸಿನಿಮಾ ತೆರೆ ಕಾಣಲಿದೆ.