ಆದಿಲ್ (Adil) ಜೊತೆಗಿನ ಮದುವೆ ಘೋಷಿಸಿದ ಕೆಲವೇ ದಿನಗಳಲ್ಲಿ ಪತಿಯ ಬಗ್ಗೆಯೇ ದೂರು ನೀಡಿ, ಜೈಲುಪಾಲಾಗುವಂತೆ (Jail) ಮಾಡಿರುವ ನಟಿ ರಾಖಿ ಸಾವಂತ್ (Rakhi Sawant), ಇದೀಗ ಬೀದಿ ಬೀದಿಯಲ್ಲಿ ಕಣ್ಣೀರು ಹಾಕುತ್ತಿದ್ದಾಳೆ. ವರದಕ್ಷಿಣೆ ಕಿರುಕುಳ ಸೇರಿದಂತೆ ಆದಿಲ್ ಮೇಲೆ ಹಲವು ಆರೋಪಗಳನ್ನು ಮಾಡಿರುವ ರಾಖಿ, ಇದೀಗ ಆದಿಲ್ ಪಾಲಕರ ಮೇಲೆ ಕಿಡಿಕಾರಿದ್ದಾರೆ.
ಆದಿಲ್ ತನಗೆ ತೊಂದರೆ ಕೊಡುತ್ತಿದ್ದಾನೆ ಎಂದು ಹೇಳಲು ಹಲವಾರು ಬಾರಿ ಅವನ ತಂದೆ ತಾಯಿಗೆ ಕರೆ ಮಾಡಿದ್ದರಂತೆ ರಾಖಿ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಕೂಡ ಬಂದಿಲ್ಲವೆಂದಿದ್ದಾರೆ. ಆದಿಲ್ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ಅವನನ್ನು ನೋಡಲು ಅಪ್ಪ ಅಮ್ಮ ಬರಲಿಲ್ಲ ಎಂದು ದೂರಿದ್ದಾಳೆ. ಈಗ ಅವನು ಜೈಲುಪಾಲಾಗಿದ್ದಾನೆ. ಈಗಲೂ ಅವನ ತಂದೆ ತಾಯಿಗೆ ಕಾಲ್ ಮಾಡುತ್ತಿದ್ದೇವೆ. ಫೋನ್ ರಿಸೀವ್ ಮಾಡುತ್ತಿಲ್ಲ ಎಂದಿದ್ದಾಳೆ ರಾಖಿ. ಇದನ್ನೂ ಓದಿ: ಆಗ ಭಾಯ್, ಈಗ ಪತಿ: ಟ್ರೋಲ್ ಆಯ್ತು ನಟಿ ಸ್ವರಾ ಭಾಸ್ಕರ್ ಪೋಸ್ಟ್
ಆದಿಲ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಬಂಧನದಿಂದ ಹೊರ ತರಲು ಅವನ ಪರವಾಗಿ ವಾದ ಮಂಡಿಸುತ್ತಿರುವ ವಕೀಲರು ಶತಪ್ರಯತ್ನ ಪಡುತ್ತಿದ್ದಾರೆ. ಇತ್ತ ರಾಖಿ ಸಾವಂತ್ ವಕೀಲರು ಕೂಡ ಆದಿಲ್ ಗೆ ಶಿಕ್ಷೆಯಾಗುವಂತೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ನಡುವೆ ಎರಡೂ ಕಡೆಯ ವಕೀಲರು ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ. ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k