ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ ತನ್ನ ಪತಿ ಆದಿಲ್ (Adil) ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರು (Mysore) ಜೈಲಿನಿಂದಲೇ ತನ್ನನ್ನು ಕೊಲ್ಲಲು ಆದಿಲ್ ಸ್ಕೆಚ್ ಹಾಕಿದ್ದಾನೆ ಎಂದು ತಿಳಿಸಿದ್ದಾರೆ. ‘ಅವನು ನನ್ನನ್ನು ಕೊಲ್ಲಲು ಯಾಕೆ ಪ್ಲ್ಯಾನ್ ಮಾಡಿದ್ದಾನೋ ಗೊತ್ತಿಲ್ಲ. ಹಣಕ್ಕಾಗಿಯಾ ಅಥವಾ ದ್ವೇಷಕ್ಕಾಗಿಯಾ’ ಎಂದು ರಾಖಿ (Rakhi Sawant) ಪ್ರಶ್ನೆ ಮಾಡಿದ್ದಾರೆ. ಅವನು ಏನೇ ಪ್ಲ್ಯಾನ್ ಮಾಡಿದರೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.
ಕೊಲ್ಲುವ (Murder)ವಿಚಾರ ಒಂದು ಕಡೆಯಾದರೆ, ಮತ್ತೊಂದು ಕಡೆ ತನಗೆ ಆದಿಲ್ ಕರೆ ಮಾಡಿ ‘ಐ ಲವ್ ಯೂ’ ಅಂತ ಹೇಳುತ್ತಿರುವ ವಿಚಾರವನ್ನೂ ಹೇಳಿಕೊಂಡಿದ್ದಾರೆ ರಾಖಿ. ಆಗಾಗ್ಗೆ ಆದಿಲ್ ಕರೆ ಮಾಡುತ್ತಾನೆ. ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಮತ್ತೆ ಜೊತೆಯಾಗಿ ಬದುಕೋಣ ಎಂದು ಹೇಳುತ್ತಾನೆ. ಆದರೆ, ಅವನನ್ನು ನಾನು ಕ್ಷಮಿಸಬಹುದು. ಮತ್ತೆ ಅವನೊಂದಿಗೆ ಬದುಕಲು ಸಾಧ್ಯವಿಲ್ಲ’ ಎಂದಿದ್ದಾರೆ. ಇದನ್ನೂ ಓದಿ:‘ಏಜೆಂಟ್’ ಸಿನಿಮಾ ಸೋಲಿನ ಬೆನ್ನಲ್ಲೇ ಪತ್ರ ಬರೆದ ಅಖಿಲ್ ಅಕ್ಕಿನೇನಿ
ಫೆಬ್ರವರಿ 7 ರಂದು ಪತಿ ಆದಿಲ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು ರಾಖಿ ಸಾವಂತ್. ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಆ ದೂರನ್ನು ಆಧರಿಸಿ ಮುಂಬೈನಲ್ಲಿ ಆದಿಲ್ ನನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಮೈಸೂರಿನಲ್ಲೂ ಆದಿಲ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಿದ್ದರಿಂದ ಆತನನ್ನು ಮೈಸೂರು ಜೈಲಿನಲ್ಲಿ ಇರಿಸಲಾಗಿದೆ. ಸ್ವತಃ ರಾಖಿ ಕೂಡ ಮೈಸೂರಿಗೆ ಬಂದು ಕೋರ್ಟಿನಲ್ಲಿ ಸಾಕ್ಷ್ಯ ನುಡಿದಿದ್ದರು.
ಹಲವು ದಿನಗಳಿಂದ ಆದಿಲ್ ಬಗ್ಗೆ ಮೌನವಹಿಸಿದ್ದ ರಾಖಿ, ಇದೀಗ ಮತ್ತೆ ಅವನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದಿಲ್ ಆದಷ್ಟು ಬೇಗ ಜೈಲಿನಿಂದ (jail) ಆಚೆ ಬರಲಿ ಎಂದು ಪ್ರಾರ್ಥನೆ ಮಾಡಿದ್ದ ಇದೇ ರಾಖಿ, ಇದೀಗ ಕೊಲ್ಲುವ ಮಾತುಗಳನ್ನು ಆಡುತ್ತಿದ್ದಾರೆ. ಈ ಕುರಿತು ಅವರು ದೂರು ನೀಡಿದರೆ ಆದಿಲ್ ಭವಿಷ್ಯ ಇನ್ನೂ ಕತ್ತಲಲ್ಲೇ ಇರಲಿದೆ.