ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತು ಮೈಸೂರು (Mysore) ಹುಡುಗ ಆದಿಲ್ (Adil) ಮದುವೆ (Marriage) ವಿಚಾರ ಮತ್ತೆ ಹಾದಿರಂಪ ಬೀದಿ ರಂಪ ಆಗಿದೆ. ಕ್ಯಾಮೆರಾಗಳ ಮುಂದೆ ಗೆಳೆಯ ಆದಿಲ್ ನನ್ನು ಹಾಡಿ ಹೊಗಳುತ್ತಿದ್ದ ರಾಖಿ, ಇದೀಗ ಅವನ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬೇರೆ ಹುಡುಗಿಯ ಜೊತೆ ಅವನು ಸಂಬಂಧವನ್ನು ಹೊಂದಿದ್ದಾನೆ ಎಂದು ಕಣ್ಣೀರು ಇಟ್ಟಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ತಾವು ಆದಿಲ್ ಜೊತೆ ಮದುವೆ ಆಗಿರುವುದಾಗಿ ರಾಖಿ ಘೋಷಣೆ ಮಾಡಿದರು. ಈ ವಿಚಾರ ಆದಿಲ್ ಮನೆಯವರಿಗೆ ಗೊತ್ತಾಗಿ ತಮಗೆ ತೊಂದರೆ ಆಗುತ್ತಿದೆ ಎನ್ನುವ ಸಂಕಟವನ್ನೂ ಅವರು ಹಂಚಿಕೊಂಡಿದ್ದರು. ಆದಿಲ್ ಮನೆಯವರು ತನ್ನ ಪತಿಯ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಮ್ಮ ಮದುವೆ ಎಲ್ಲಿ ಮುರಿದು ಬೀಳುತ್ತದೆಯೋ ಎನ್ನುವ ಭಯ ಇದೆ. ಮೈಸೂರಿನವರು ನಮ್ಮನ್ನು ರಕ್ಷಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ, ಆದಿಲ್ ತಮ್ಮ ಮದುವೆ ಬಗ್ಗೆ ಘೋಷಣೆ ಮಾಡಬೇಕು ಎಂದೂ ಒತ್ತಾಯಿಸಿದ್ದರು. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ಜೊತೆ ಕಾಣಿಸಿಕೊಂಡ ಕಿಚ್ಚ ಸುದೀಪ್ : ಕುತೂಹಲ ಮೂಡಿಸಿದ ಭೇಟಿ
ತಮ್ಮ ಮದುವೆ ವಿಚಾರ ಹಾಗೂ ಫೋಟೋಗಳನ್ನು ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿದ್ದಂತೆಯೇ ಅನಿವಾರ್ಯವಾಗಿ ಆದಿಲ್ ಕೂಡ ಒಪ್ಪಿಕೊಳ್ಳಬೇಕಾಯಿತು. ಆನಂತರ ಒಟ್ಟಿಗೆ ನಗುನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿತ್ತು ಜೋಡಿ. ಇದೀಗ ರಾಖಿ ಮತ್ತೆ ಕಣ್ಣೀರು ಹಾಕಿದ್ದಾರೆ. ಆದಿಲ್ ಜೊತೆಗಿನ ಮದುವೆಯನ್ನು ಉಳಿಸಿಕೊಳ್ಳಬೇಕು. ಅವನ ಜೊತೆ ಸಂಬಂಧ ಹೊಂದಿರುವ ಹುಡುಗಿಗೆ ಅರ್ಥ ಮಾಡಿಸಬೇಕು ಎಂದು ಅವರು ಹೇಳಿದ್ದಾರೆ.
ಆದಿಲ್ ಗೆ ಹಲವಾರು ಬಾರಿ ಎಚ್ಚರಿಕೆ ಕೊಟ್ಟಿದ್ದೇನೆ. ತಿದ್ದಿಕೊಳ್ಳಲೂ ತಿಳಿಸಿರುವೆ. ಆದರೆ, ಅವನು ತಿದ್ದಿಕೊಳ್ಳುತ್ತಿಲ್ಲ. ಮದುವೆ ಅನ್ನುವುದು ದೊಡ್ಡ ವಿಚಾರ. ನಾನು ಈ ಮದುವೆಯನ್ನು ಉಳಿಸಿಕೊಳ್ಳಲೇಬೇಕು. ಆ ಹುಡುಗಿಯನ್ನು ಬಿಟ್ಟು ಅವನು ಬರಬೇಕು. ಅವನು ನಮ್ಮ ಮದುವೆಯ ವಿಚಾರವನ್ನು ಯಾಕೆ ಗುಟ್ಟಾಗಿ ಇಟ್ಟಿದ್ದ ಎನ್ನುವುದು ಈಗ ಗೊತ್ತಾಗುತ್ತಿದೆ. ಇಂಥದ್ದೊಂದು ಅಫೇರ್ ಇಟ್ಟುಕೊಳ್ಳಲು ಅವನು ನಾಟಕ ಮಾಡಿದ ಎಂದು ರಾಖಿ ಕ್ಯಾಮೆರಾಗಳ ಮುಂದೆ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k