ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತು ಮೈಸೂರಿನ ಹುಡುಗ ಆದಿಲ್ ಖಾನ್ (Adil) ಮದುವೆ (Marriage) ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಮ್ಮಿಬ್ಬರದ್ದೂ ಮದುವೆ ಆಗಿಲ್ಲ ಎಂದು ಹೇಳುತ್ತಿದ್ದ ಆದಿಲ್, ಕೊನೆಗೂ ಒಪ್ಪಿಕೊಂಡು ಆಗಿದೆ. ಆದರೆ, ಮೈಸೂರಿನಿಂದ ಆತನಿಗೆ ನಿರಂತರವಾಗಿ ಕರೆ ಬರುತ್ತಿರುವುದಾಗಿ ರಾಖಿ ಹೇಳಿಕೊಂಡಿದ್ದಾರೆ. ಕ್ಯಾಮೆರಾಗಳ ಮುಂದೆ ದುಃಖಿಸುತ್ತಾ ಮಾತನಾಡಿರುವ ಅವರು ‘ಮೈಸೂರಿನ (Mysore) ಜನ ನನ್ನೊಂದಿಗೆ ನಿಲ್ಲಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
Advertisement
‘ಆದಿಲ್ ನನ್ನನ್ನು ಮದುವೆ ಆದಾಗಿಂದ ಅವರ ಕುಟುಂಬದಿಂದ ಮತ್ತು ಮೈಸೂರಿನ ಹಲವರು ಅವನಿಗೆ ನಿರಂತರವಾಗಿ ಕರೆ ಮಾಡುತ್ತಿದ್ದಾರೆ. ರಾಖಿಯನ್ನು ಬಿಟ್ಟು ಬರುವಂತೆ ಒತ್ತಡ ಹೇರುತ್ತಿದ್ದಾರೆ. ಇದು ನನಗೆ ಆತಂಕ ಮೂಡಿಸಿದೆ. ಅವನನ್ನು ನಾನು ಮನಸಾರೆ ಇಷ್ಟಪಟ್ಟು ಮದುವೆ ಆಗಿರುವೆ. ಈ ವಿಷಯದಲ್ಲಿ ನನಗೆ ಮೈಸೂರು ಜನ ಆಶೀರ್ವದಿಸಬೇಕು. ನಾವಿಬ್ಬರೂ ಸುಖವಾಗಿ ಜೀವನ ನಡೆಸುವಂತೆ ಸಪೋರ್ಟ್ ಮಾಡಿ’ ಎಂದು ರಾಖಿ ಕೈ ಮುಗಿದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯಾಗುತ್ತಿರುವ ಗುಡ್ ನ್ಯೂಸ್ ಕೊಟ್ರು ʻಯೇ ಜವಾನಿ ಹೇ ದಿವಾನಿ’ ನಟಿ
Advertisement
Advertisement
ಮದುವೆಯಾಗಿ ಏಳು ತಿಂಗಳಿಗೆ ರಾಖಿ ಸಾವಂತ್ ತಾಯಿ ಆಗುತ್ತಿದ್ದಾರಾ? ಇಂಥದ್ದೊಂದು ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸುದ್ದಿಗೆ ಪುಷ್ಠಿ ಕೊಡುವಂತೆ ರಾಖಿ ಆಡಿದ ಮಾತುಗಳು ಕೂಡ ವೈರಲ್ ಆಗುತ್ತಿವೆ. ಮಾಧ್ಯಮದೊಂದಿಗೆ ಮಾತನಾಡುತ್ತಾ ಮದುವೆ ಬಗ್ಗೆ ಪ್ರಸ್ತಾಪ ಮಾಡುತ್ತಾರೆ ರಾಖಿ. ಆಗ ಸಂದರ್ಶಕರು ‘ನೀವು ಪ್ರಗ್ನೆಂಟಾ?’ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ‘ನೋ ಕಾಮೆಂಟ್ಸ್’ ಎಂದು ಹೇಳುವ ಮೂಲಕ ಅನುಮಾನಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ ರಾಖಿ ಸಾವಂತ್.
Advertisement
ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ. ಜೊತೆಗೆ ಇದೀಗ ಪ್ರಗ್ನೆಂಟ್ ಎನ್ನುವ ಸುದ್ದಿಗೂ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k