ಮಂಡ್ಯ: ಶರ್ಟ್ ಬಟನ್ ಹಾಕಿ ಶಿಸ್ತಿನಿಂದ ನಡೆದುಕೊಳ್ಳಿ ಎಂದು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ (Congress) ಶಾಸಕರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಶಿಸ್ತಿನ ಪಾಠ ಹೇಳಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಇಂದು ಆದಿಚುಂಚನಗಿರಿ ಮಠಕ್ಕೆ ಮಂಡ್ಯ ಕಾಂಗ್ರೆಸ್ ಶಾಸಕ ಭೇಟಿ ನೀಡಿದರು. ಪೂಜೆ ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಡಿಕೆಶಿ, ಸಿದ್ದು ನಿವಾಸದ ಮುಂದೆ ಬೆಂಬಲಿಗರಿಂದ ಮುಂದಿನ ಮುಖ್ಯಮಂತ್ರಿ ಫ್ಲೆಕ್ಸ್ ಅಳವಡಿಕೆ
ಮಾತುಕತೆ ವೇಳೆ ಮಂಡ್ಯ ಶಾಸಕ ರವಿಕುಮಾರ್ (Ganiga Ravikumar) ಶರ್ಟ್ ಬಟನ್ ಹಾಕಿಲ್ಲದಿರುವುದನ್ನು ಶ್ರೀಗಳು ಗಮನಿಸಿದರು. ಶರ್ಟ್ ಬಟನ್ ಹಾಕುವಂತೆ ಸೂಚಿಸಿ ಕಾಂಗ್ರೆಸ್ ಶಾಸಕನಿಗೆ ಶಿಸ್ತಿನ ಪಾಠ ಹೇಳಿದರು.
ನೀನಿಗ ಶಾಸಕ, ಹೀಗೆಲ್ಲ ಓಡಾಡಬಾರದು. ಮೊದಲು ಶರ್ಟ್ ಬಟನ್ ಹಾಕಿ ಎಂದು ತಿಳಿಸಿದರು. ಶ್ರೀಗಳ ಶಿಸ್ತಿನ ಪಾಠದ ಬೆನ್ನಲ್ಲೇ ಎಚ್ಚೆತ್ತು ಶಾಸಕ ಗಣಿಗ ರವಿಕುಮಾರ್ ಶರ್ಟ್ ಬಟನ್ ಹಾಕಿಕೊಂಡರು. ಇದನ್ನೂ ಓದಿ: ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಕೆ. ಹೆಚ್ ಮುನಿಯಪ್ಪ