ಬೆಂಗಳೂರು: ವೀರಮದಕರಿ ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ರಾಗಿಣಿ ದ್ವಿವೇದಿ. ಚಿಗರೆಯಂತೆ ಕನ್ನಡಕ್ಕಾಗಮಿಸಿ ಇಲ್ಲಿಯೇ ನೆಲೆ ಕಂಡುಕೊಂಡಿರೋ ರಾಗಿಣಿ ಆ ನಂತರದಲ್ಲಿಯೂ ಸಾಕಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಥರ ಥರದ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಮೂಲಕವೇ ಕನ್ನಡ ಪ್ರೇಕ್ಷಕರ ಮನ ಗೆದ್ದಿರೋ ರಾಗಿಣಿಯೀಗ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲಕ ಶರಣ್‍ಗೆ ಜೋಡಿಯಾಗಿ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಯೋಗಾನಂದ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿನ ನಾಯಕಿ ಪಾತ್ರವನ್ನು ರಾಗಿಣಿ ಬಿಟ್ಟರೆ ಬೇರೆ ಯಾರೂ ನಿರ್ವಹಿಸೋದು ಕಷ್ಟ ಎಂಬ ಬಗ್ಗೆ ನಿರ್ದೇಶಕರು ಮತ್ತು ಚಿತ್ರತಂಡ ಆರಂಭದಲ್ಲಿಯೇ ಫಿಕ್ಸಾಗಿತ್ತಂತೆ. ಯಾಕೆಂದರೆ ಅದರ ಚಹರೆ ರಾಗಿಣಿ ಪಾಲಿಗೆ ಪಕ್ಕಾ ಸೂಟ್ ಆಗುವಂತಿತ್ತು. ಆದರೆ ರಾಗಿಣಿ ಪಾಲಿಗದು ನಿಜಕ್ಕೂ ಸವಾಲಿನ ಪಾತ್ರವಾಗಿತ್ತು!
Advertisement
Thursday experiments…. 1 day to go ….❤️???? #AdhyakshainAmerica #Oct4 ???????? #Ragini25 #ThursdayThoughts #sandalwood pic.twitter.com/YjVQ4nQgdF
— ???? Ragini Dwivedi ???? (@raginidwivedi24) October 3, 2019
Advertisement
ಯಾಕೆಂದರೆ ಈ ಪಾತ್ರಕ್ಕೂ ಕಾಮಿಡಿ ಶೇಡುಗಳಿವೆ. ಕಮರ್ಶಿಯಲ್ ಸಿನಿಮಾಗಳಲ್ಲಿ ಗ್ಲಾಮರ್ ಗೊಂಬೆಯಂತೆ ಮಿಂಚಿದ ಯಾರಿಗೇ ಆದರೂ ಏಕಾಏಕಿ ಕಾಮಿಡಿ ಟಚ್ ಇರೋ ಪಾತ್ರಗಳನ್ನು ಮಾಡಬೇಕಾಗಿ ಬಂದಾಗ ಕಸಿವಿಸಿ ಕಾಡುತ್ತೆ. ಯಾಕೆಂದರೆ ಕಾಮಿಡಿ ಟೈಮಿಂಗ್ ಅನ್ನು ಹಠಾತ್ತನೆ ಫಾಲೋ ಮಾಡೋದು ಬಲು ಕಷ್ಟದ ಕೆಲಸ. ಆದರೂ ರಾಗಿಣಿ ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ಗೆದ್ದಿದ್ದಾರೆ. ಒಂದಷ್ಟು ತಯಾರಿಯೊಂದಿಗೆ ಅವರು ಹಾಸ್ಯರಸ ಹೊಂದಿರೋ ಪಾತ್ರದ ಮೂಲಕ ಶರಣ್‍ಗೆ ಸರಿಯಾಗಿಯೇ ಸಾಥ್ ಕೊಟ್ಟಿದ್ದಾರಂತೆ. ರಾಗಿಣಿ ಯಾವ ಥರದ ಪಾತ್ರದಲ್ಲಿ ನಟಿಸಿದ್ದಾರೆಂಬ ವಿಚಾರ ಈ ವಾರವೇ ಜಾಹೀರಾಗಲಿದೆ.
Advertisement
Advertisement