ಕಲಬುರಗಿ: PSI ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧಿತರಾದ ADGP ಅಮೃತ್ ಪೌಲ್ ಕೇವಲ ಸೇಫ್ಟಿ ಪಿನ್ ಅಷ್ಟೇ. ಮೂಲ ಕಿಂಗ್‌ಪಿನ್‌ಗಳು ವಿಧಾನಸೌಧದಲ್ಲೇ ಇದ್ದಾರೆ ಎಂದು ಕಾಂಗ್ರೆಸ್ ಹಿರಿಯ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Advertisement
ಕಲಬುರಗಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌದದ 3ನೇ ಮಹಡಿಯಲ್ಲಿನ ಅನೇಕರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಸಿಎಂ ಅವರ ಅಭ್ಯರ್ಥಿಗಳು ಎಷ್ಟು? ಅವರ ಮಗನ ಅಭ್ಯರ್ಥಿಗಳು ಎಷ್ಟು? ಅಂದಿನ ಗೃಹ ಸಚಿವರ ಅಭ್ಯರ್ಥಿಗಳು ಎಷ್ಟು? ಇದೆಲ್ಲವೂ ಹೊರಗೆ ಬರಬೇಕಲ್ವಾ? ನೀವು ಭ್ರಷ್ಟರು ಅಲ್ಲದಿದ್ರೆ PSI ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಸವಾಲು ಎಸೆದಿದ್ದಾರೆ.
Advertisement
Advertisement
ಇದೇ ವೇಳೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ `ಕರ್ನಾಟಕ ಅತ್ಯಂತ ಭ್ರಷ್ಟ ಸರ್ಕಾರ’ ಎಂದು ಹೆಸರು ಬಂದಿತ್ತು. ದೆಹಲಿಯ ಪ್ರತಿಷ್ಟಿತ ಮ್ಯಾಗಜಿನ್ ಸಹ ಇದನ್ನು ಉಲ್ಲೇಖಿಸಿತ್ತು. ಮತ್ತೆ ಈಗ ಅದೇ ಸುದ್ದಿಯನ್ನೇ ಮರುಪ್ರಕಟ ಮಾಡಬೇಕಿದೆ. ಪಿಎಸ್‌ಐ ಹಗರಣದ ಬಗ್ಗೆ ಸದನದಲ್ಲೇ ಶಾಸಕ ರವಿ ಅವರ ಪ್ರಶ್ನೆಗೆ ಉತ್ತರಿಸಿ ಉನ್ನತ ತಂಡದ ಅಧಿಕಾರಿಗಳು ಕ್ಲೀನ್ ಚಿಟ್ ಕೊಟ್ಟಿರುವುದಾಗಿ ಗೃಹ ಸಚಿವರು ಉತ್ತರಿಸಿದ್ದರು. ಈಗ ಎಡಿಜಿಪಿ ಅರೆಸ್ಟ್ ಆಗಿದ್ದಾರೆ. ಗೃಹ ಸಚಿವರು ನಮ್ಮ ಮೇಲೆ ಟೀಕೆ ಮಾಡುತ್ತಿದ್ದಾರೆ. ಅವರಿಗೆ ಕಾಮನ್ ಸೆನ್ಸ್ ಇಲ್ಲವಾ? ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದೇ ಸಮರ್ಥಿಸಿದ್ದ ಗೃಹ ಸಚಿವರು ಈಗ ಎಡಿಜಿಪಿ ಸೇರಿದಂತೆ ಸುಮಾರು 60 ಜನ ಅಧಿಕಾರಿಗಳು ಹಾಗೂ ಇತರರು ಅರೆಸ್ಟ್ ಆಗಿದ್ದಾರೆ ಗೃಹ ಸಚಿವರು ಈಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.