– ಯಶವಂತಪುರದಿಂದ ಲಕ್ನೋ, ಅಯೋಧ್ಯಾಧಾಮಕ್ಕೆ ನೇರ ಸಂಚಾರ
ಬೆಂಗಳೂರು: ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕೌಂಟ್‌ಡೌನ್ ಶುರುವಾಗಿದೆ. ಬೆಂಗಳೂರಿನ ಜನರೂ ಸಹ ಶ್ರೀರಾಮ ದರ್ಶನಕ್ಕೆ ತೆರಳಲು ಮುಂದಾಗಿದ್ದಾರೆ. ಆದ್ದರಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು ಸೇವೆ (Train Service) ಕಲ್ಪಿಸಲು ಇಲಾಖೆ ಮುಂದಾಗಿದೆ.
ಅಯೋಧ್ಯೆಗೆ ರೈಲಿನ ಮೂಲಕ ತೆರಳುವವರು ಈಗಾಗಲೇ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನೈರುತ್ಯ ವಲಯದ ರೈಲ್ವೆ ಹೆಚ್ಚುವರಿ ರೈಲು ಸೇವೆ ಕಲ್ಪಿಸಲು ಚಿಂತನೆ ನಡೆಸಿದ್ದಾರೆ. ಈ ಹಿಂದೆಯೂ ಸಹ ಬೆಂಗಳೂರಿನ ಯಶವಂತಪುರದಿಂದ ಅಯೋಧ್ಯೆ ಧಾಮಕ್ಕೆ ನೇರ ರೈಲು ಸಂಪರ್ಕ ಸೇವೆ ಇತ್ತು. ಇದರೊಂದಿಗೆ ಹೆಚ್ಚುವರಿ ರೈಲು ಸೇವೆಗಳನ್ನು ಕಲ್ಪಿಸಲಾಗಿದೆ. ಯಾವ್ಯಾವ ರೈಲು, ಯಾವ ಸಮಯಕ್ಕೆ ಸಂಚರಿಸಲಿವೆ ಅಂತ ತಿಳಿಯಬೇಕಾದ್ರೆ ಮುಂದೆ ಓದಿ… ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..
Advertisement
ಬೆಂಗಳೂರಿಂದ ಅಯೋಧ್ಯೆಗೆ ರೈಲು ಸೇವೆ:
Advertisement
1) ಯಶವಂತಪುರ – ಗೋರಖ್‌ಪುರ 15024 –
ಗುರುವಾರ ಯಶವಂತಪುರದಿಂದ 23:40ಕ್ಕೆ ಸಂಚಾರ (11.40ಕ್ಕೆ)
ತಲುಪುವುದು – 16:24 ಗಂಟೆಗೆ, ಶನಿವಾರ ಅಯೋಧ್ಯಧಾಮ (4.24ಕ್ಕೆ)
Advertisement
2) ಯಶವಂತಪುರ – ಲಕ್ನೋ ಎಕ್ಸ್‌ಪ್ರೆಸ್ 12539 –
ಬುಧವಾರ ಯಶವಂತಪುರದಿಂದ 13:30ಕ್ಕೆ (1.30ಕ್ಕೆ)
ತಲುಪುವುದು – 10:35ಕ್ಕೆ ಶುಕ್ರವಾರ
Advertisement
3) ಯಶವಂತಪುರ – ಲಕ್ನೋ ಎಕ್ಸ್‌ಪ್ರೆಸ್ 22683
ಸೋಮವಾರ – ಯಶವಂತಪುರದಿಂದ – 23:40ಕ್ಕೆ (11.40ಕ್ಕೆ)
ತಲುಪುವುದು – ಲಕ್ನೋ – ಬುಧವಾರ 18:10 ಬಾದ್ ಶಾ ನಗರ ರೈಲು ನಿಲ್ದಾಣ (6.10ಕ್ಕೆ)
4) ಯಶವಂತಪುರ – ಗೋರಖ್‌ಪುರ 12592
ಯಶವಂತಪುರ : ಸೋಮವಾರ :17:05ಕ್ಕೆ ಸಂಚಾರ ಆರಂಭ (5.05ಕ್ಕೆ)
ತಲುಪುವುದು – ಬುಧುವಾರ 10:10ಕ್ಕೆ ಬಾದ್‌ಶಾ ನಗರ ನಿಲ್ದಾಣ
5) ಯಶವಂತಪುರ- ಗೋರಖ್‌ಪುರ 22534
ಬುಧವಾರ : 23:40ಕ್ಕೆ ಸಂಚಾರ ಆರಂಭ (11.40)
ತಲುಪುವುದು – ಶುಕ್ರವಾರ 13:45ಕ್ಕೆ ಬಾದ್‌ಶಾ ನಗರ ನಿಲ್ದಾಣ (1.45ಕ್ಕೆ)
ಇನ್ನು ಕಳೆದ 1 ವಾರದಿಂದಲೂ ಅಯೋಧ್ಯೆಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರಯಾಣಿಕರಿಂದ ಹೆಚ್ಚುವರಿ ರೈಲು ಸೇವೆಗೂ ಮನವಿ ಬರ್ತಿವೆ. ಹೀಗಾಗಿ ಬೆಂಗಳೂರು, ಮೈಸೂರು ಹಾಗೂ ಇತರೆ ಕೆಲ ಭಾಗಗಳಿಂದಲೂ ರೈಲು ಸೇವೆ ಆರಂಭವಾಗುವ ಸಾಧ್ಯತೆಗಳಿವೆ. ಹೆಚ್ಚುವರಿ ರೈಲು ಓಡಾಟಕ್ಕೆ ನೈರುತ್ಯ ವಲಯದ ರೈಲ್ವೆ ಅಧಿಕಾರಿಗಳು ಕೂಡ ಸಿದ್ಧತೆಗಳನ್ನ ಮಾಡಿಕೊಳ್ತಿದ್ದಾರೆ. ಕಡಿಮೆ ಬಜೆಟ್‌ನಲ್ಲಿ, ಕುಟುಂಬ ಸಮೇತ ಸುಖಕರ ಪ್ರಯಾಣ ಮಾಡಲು ಜನ ರೈಲು ಪ್ರಯಾಣದ ಮೊರೆ ಹೋಗ್ತಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಇದನ್ನೂ ಓದಿ: ಸೋಮವಾರ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ- ಅಯೋಧ್ಯೆಯಲ್ಲಿ ಬಿಗಿ ಭದ್ರತೆ