ಕೊಪ್ಪಳ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಮೇಲೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪತ್ನಿ ಮತ್ತು ಕುಟುಂಬಸ್ಥರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ ನಿನ್ನೆ ಕಚೇರಿ ಕೆಲಸದ ನಿಮಿತ್ತ ಎಡಿಸಿ ರುದ್ರೇಶ ಘಾಳಿ ಮನೆಗೆ ಹೋಗಿದ್ದರು. ಏಕಾಏಕಿ ರುದ್ರೇಶ ಘಾಳಿ ಪತ್ನಿ ಮತ್ತು ಅವರ ಜೊತೆಗಿದ್ದ 20 ಕ್ಕೂ ಹೆಚ್ಚು ಜನ ಸೇರಿಕೊಂಡು ನನ್ನ ಮೇಲೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂದು ಕೃಷ್ಣವೇಣಿ ಆರೋಪಿಸಿದ್ದಾರೆ.
Advertisement
ಆ ಸಂದರ್ಭದಲ್ಲಿ ಯಾರೂ ಕೂಡ ಕೃಷ್ಣವೇಣಿಯವರ ಸಹಾಯಕ್ಕೆ ಬಂದಿಲ್ಲ. ನಂತರ ಅವರ ಕಾರ್ ಡ್ರೈವರ್ ತಮ್ಮ ಗೆಳೆಯರಿಗೆ ಫೋನ್ ಮಾಡಿ ಕರೆಸಿದ್ದಾನೆ. ಹಲ್ಲೆಗೆ ಒಳಗಾದ ಅಧಿಕಾರಿ ಕೃಷ್ಣವೇಣಿಯವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾನೆ.
Advertisement
ಈ ಘಟನೆ ನಡೆಯುತ್ತಿದಂತೆ ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸರ್ಕಾರಿ ಅಧಿಕಾರಿಯ ಮೇಲೆ ಈ ರೀತಿ ಹಲ್ಲೆ ನಡೆದರೂ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.