ನವದೆಹಲಿ: ಸರ್ಕಾರದ ಮುಂಬರುವ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಶುಕ್ರವಾರ ಆಸಕ್ತಿ ತೋರಿರುವ 4 ಮುಖ್ಯ ಕಂಪನಿಗಳಲ್ಲಿ ಅದಾನಿ ಗ್ರೂಪ್ ಕೂಡಾ ಒಂದು ಎಂದು ಹೇಳಲಾಗುತ್ತಿದೆ.
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸಿದ್ದೇ ಆದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ, ಸುನಿಲ್ ಮಿತ್ತಲ್‌ರ ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಲಿಮಿಟೆಡ್‌ನಂತಹ ಮುಖ್ಯ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲಿದೆ.
Advertisement
Advertisement
Advertisement
ಟೆಲಿಕಾಂ ಇಲಾಖೆ ಶೀಘ್ರವೇ ಅತ್ಯಂತ ವೇಗದ ಇಂಟರ್‌ನೆಟ್ ಒದಗಿಸುವ 5ಜಿ ಸ್ಪೆಕ್ಟ್ರಂ ಹರಾಜನ್ನು ನಡೆಸಲಿದ್ದು, ಅದಾನಿ ಗ್ರೂಪ್ ಸ್ಪೆಕ್ಟ್ರಂ ರೇಸ್‌ಗೆ ಪ್ರವೇಶಿಸಲು ಆಸಕ್ತಿ ಹೊಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಬಗ್ಗೆ ಅದಾನಿ ಗ್ರೂಪ್ ವಕ್ತಾರರು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇದನ್ನೂ ಓದಿ: ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಮಸ್ಕ್
Advertisement
ಸ್ಪೆಕ್ಟ್ರಂ ಹರಾಜಿಗೆ 4 ಕಂಪನಿಗಳು ಜುಲೈ 12ರ ಒಳಗಾಗಿ ತಮ್ಮ ಮಾಲೀಕತ್ವದ ವಿವರಗಳನ್ನು ಒದಗಿಸಬೇಕಿದೆ. ಬಳಿಕ ಬಿಡ್ ಕಂಪನಿಗಳ ಪೂರ್ವ ಅರ್ಹತೆಯನ್ನು ನೋಡಲಾಗುತ್ತದೆ. ಜುಲೈ 19ರ ಒಳಗೆ ಕಂಪನಿಗಳು ಅರ್ಜಿಗಳನ್ನು ಹಿಂತೆಗೆದುಕೊಳ್ಳುವ ಅವಕಾಶವನ್ನೂ ಹೊಂದಿರುತ್ತದೆ. ಜುಲೈ 20ರಂದು ಬಿಡ್ ಕಂಪನಿಗಳ ಹೆಸರನ್ನು. ಜುಲೈ 27 ರಿಂದ ಹರಾಜು ಪ್ರಾರಂಭವಾಗುವ ನಿರೀಕ್ಷೆಯಿದೆ.
ಇಲ್ಲಿಯವರೆಗೆ ದೇಶದ ಶ್ರೀಮಂತ ವ್ಯಕ್ತಿಗಳಾದ ಅದಾನಿ ಮತ್ತು ಮುಕೇಶ್ ಅಂಬಾನಿ ನೇರವಾಗಿ ಪೈಪೋಟಿಗೆ ಇಳಿದಿರಲಿಲ್ಲ. ಆದಾನಿ ಪೋರ್ಟ್, ಕಲ್ಲಿದ್ದಲು, ವಿಮಾನ ನಿಲ್ದಾಣ ಇತ್ಯಾದಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದರೆ, ರಿಲಯನ್ಸ್ ಪೆಟ್ರೋಲಿಯಂ, ಟೆಲಿಕಾಂ, ಮಾಧ್ಯಮ ಇತ್ಯಾದಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ