– 12,000 ಉದ್ಯೋಗ ಸೃಷ್ಟಿಯ ಗುರಿ
ಪಾಟ್ನಾ: ಬಿಹಾರದಲ್ಲಿ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪಿಸಲು ಅದಾನಿ ಸಮೂಹ (Adani Group) 20,000 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ನಿರ್ದೇಶಕ ಪ್ರಣವ್ ಅದಾನಿ (Pranav Adani) ತಿಳಿಸಿದ್ದಾರೆ.
ಶುಕ್ರವಾರ ಪಾಟ್ನಾದ ʻಬಿಹಾರ ಬಿಸಿನೆಸ್ ಕನೆಕ್ಟ್ʼ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಣವ್, ಸಂಘಟಿತ ಹೂಡಿಕೆ ಮಾರ್ಗಸೂಚಿಗಳನ್ನು ತಿಳಿಸಿದರು. ಇದೇ ವೇಳೆ ಬಿಹಾರದಲ್ಲಿ ಪವರ್ ಪ್ಲಾಂಟ್ ಪ್ರಾಜೆಕ್ಟ್‌ಗೆ ಹೂಡಿಕೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಅಮಿತ್ ಶಾ ಹೇಳಿಕೆ ಗದ್ದಲ, ಕಾಂಗ್ರೆಸ್ ಪ್ರತಿಭಟನೆ; ಅಧಿವೇಶನದ ಕೊನೆಯ ದಿನವೂ ಕಲಾಪ ಮುಂದೂಡಿಕೆ!
Advertisement
Advertisement
ಬಿಹಾರದ ಇಂಧನ ವಲಯದಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹ ಯೋಜಿಸಿದೆ. ಅಲ್ಟ್ರಾ-ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್ (Thermal Power Plant) ಸ್ಥಾಪಿಸಲು ಸುಮಾರು 20,000 ಕೋಟಿ ರೂ. ಹೂಡಿಕೆ ಮಾಡುವುದು ನಮ್ಮ ಗುರಿಯಾಗಿದೆ. ಇಂತಹ ಬೃಹತ್ ಯೋಜನೆಯಿಂದ ಮುಂದಿನ ದಿನಗಳಲ್ಲಿ ಕನಿಷ್ಠ 12,000 ಉದ್ಯೋಗಾವಕಾಶ ಸೃಷ್ಟಿಸುತ್ತದೆ. ಕಾರ್ಯಾಚರಣೆ ಹಂತದಲ್ಲೇ 1,500 ನುರಿತರಿಗೆ ಉದ್ಯೋಗ ಕಲ್ಪಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಎನ್‌ಜಿ ಟ್ಯಾಂಕರ್ ನಡುವೆ ಡಿಕ್ಕಿ – ಧಗಧಗಿಸಿದ ಅಗ್ನಿ ಜ್ವಾಲೆ, ನಾಲ್ವರು ಸಜೀವ ದಹನ, 15 ಮಂದಿ ಸಾವು!
Advertisement
Advertisement
ಬಿಹಾರದಲ್ಲಿ ಅತಿದೊಡ್ಡ ಖಾಸಗಿ ಹೂಡಿಕೆದಾರನಾಗಿರುವ ಅದಾನಿ ಸಮೂಹ ಈಗಾಗಲೇ ಗ್ಯಾಸ್ ವಿತರಣೆ, ಕೃಷಿ ಲಾಜಿಸ್ಟಿಕ್ಸ್ ಕೇಂದ್ರಗಳು ಸೇರಿದಂತೆ 8,500 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿದೆ. ಇದರಿಂದ 2,500 ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಈ ವಲಯಗಳಲ್ಲಿ ಈಗ ಇನ್ನೂ ಹೆಚ್ಚುವರಿ 2,300 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಹಾಗಾಗಿ ಹೆಚ್ಚುವರಿ 25,000 ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ವಿವರಿಸಿದರು.
ಇದಲ್ಲದೇ ಬಿಹಾರದಲ್ಲಿ ರೈಲ್ವೆ ಟರ್ಮಿನಲ್‌ಗಳು, ಐಸಿಡಿಗಳು (ಒಳನಾಡಿನ ಕಂಟೈನರ್ ಡಿಪೋಗಳು) ಹಾಗೂ ಕೈಗಾರಿಕಾ ಗೋದಾಮಿನಂತಹ ಮೂಲ ಸೌಕರ್ಯಗಳ ಅಭಿವೃದ್ಧಿಗೆ 1,000 ಕೋಟಿ ರೂ. ಹೂಡಿಕೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ. ಅದಕ್ಕಾಗಿ ಸರ್ಕಾರ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಾಮಮಂದಿರ ಕಟ್ಟೋದ್ರಿಂದ ಹಿಂದೂ ನಾಯಕನಾಗಲು ಸಾಧ್ಯವಿಲ್ಲ: ಮೋಹನ್ ಭಾಗವತ್
ಇನ್ನೂ ಬಿಹಾರದ 5 ಪ್ರಮುಖ ನಗರಗಳಲ್ಲಿ ವಿದ್ಯುತ್ ಬಳಕೆಯ ಮೇಲ್ವಿಚಾರಣೆಯನ್ನು ಸ್ವಯಂಚಾಲಿತಗೊಳಿಸಲು 28 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ಮೀಟರ್ ಸ್ಥಾಪಿಸಲು ಅದಾನಿ ಸಮೂಹ 2,100 ಕೋಟಿ ರೂ. ಹೂಡಿಕೆ ಮಾಡಿದೆ. ಇದು ತಂತ್ರಜ್ಞಾನ ವಿಭಾಗದಲ್ಲಿ 4,000 ಮಂದಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಪ್ರಣವ್ ಅದಾನಿ ತಿಳಿಸಿದರು.