ಸಿಡ್ನಿ: ಬಿಗ್‍ಬಾಶ್ ಲೀಗ್‍ನಲ್ಲಿ (Big Bash league) ಮೆಲ್ಬರ್ನ್ ಸ್ಟಾರ್ ತಂಡ ಬೌಲರ್ ಆ್ಯಡಂ ಜಂಪಾ (Adam Zampa) ಮಾಡಿದ ಮಂಕಡ್ ರನೌಟ್‌ನ್ನು (Mankad Run Out) ಅಂಪೈರ್ ನಾಟೌಟ್ ನೀಡಿರುವುದು ವಿವಾದಕ್ಕಿಡಾಗಿದೆ.
Advertisement
ಮೆಲ್ಬರ್ನ್ ರೆನೆಗೇಡ್ಸ್ ತಂಡದ ಪರ ನಾನ್‍ಸ್ಟ್ರೈಕ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಟಾಮ್ ರೋಜರ್ಸ್ ಇತ್ತ ಬೌಲಿಂಗ್ ಆರಂಭಿಸುತ್ತಿದ್ದ ಜಂಪಾರನ್ನು ನೋಡಿ ಕ್ರಿಸ್ ಬಿಟ್ಟು ಮುಂದೆ ಓಡಿದ್ದಾರೆ. ಈ ವೇಳೆ ಜಂಪಾ ಮಂಕಡ್ ರನೌಟ್ ಮಾಡಿದ್ದಾರೆ. ಇದನ್ನೂ ಓದಿ: ಬುಮ್ರಾ ಈಸ್ ಬ್ಯಾಕ್ – ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ
Advertisement
Advertisement
ಈ ವೇಳೆ ಅನ್‍ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ ನಿರ್ಧರಿಸುವಂತೆ ತಿಳಿಸಿದ್ದಾರೆ. ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಈ ವೇಳೆ ಪ್ರಶ್ನಿಸಿದಾಗ ಜಾಂಪ ಬೌಲಿಂಗ್ ಆಕ್ಷನ್ ಮಾಡಿ ಕ್ರಿಸ್‍ನಲ್ಲಿ ಕೈ ಇದ್ದ ಕಾರಣ ಈ ನಿರ್ಧಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಿಲ್ಲ ಪಂತ್ – ವಿಕೆಟ್ ಕೀಪರ್ ರೇಸ್‍ನಲ್ಲಿ ಉಪೇಂದ್ರ ಯಾದವ್
Advertisement
ಕ್ರಿಕೆಟ್ ನಿಯಮದ ಪ್ರಕಾರ ಇದೀಗ ಮಂಕಡ್ ರನ್ ಔಟ್ ಅಧಿಕೃತವೆಂದು ಘೋಷಿಸಲಾಗಿದೆ. ಹಲವು ಮಂಕಡ್ ರನೌಟ್ ಕೂಡ ಮಾಡಿ ಅಂಪೈರ್‌ಗಳು ಔಟ್ ಎಂಬ ತೀರ್ಮಾನ ನೀಡಿದ್ದಾರೆ. ಆದರೆ ಇಲ್ಲಿ ಅಂಪೈರ್ ನಾಟೌಟ್ ನೀಡಿ ಚರ್ಚೆಗೆ ಗ್ರಾಸವಾಗಿದೆ.
Spicy, spicy scenes at the MCG.
Not out is the call…debate away, friends! #BBL12 pic.twitter.com/N6FAjNwDO7
— KFC Big Bash League (@BBL) January 3, 2023
ಮಂಕಡ್ ಔಟ್:
ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರಿಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನೌಟ್ ಎಂದೇ ಪರಿಗಣಿಸಲಾಗುವುದಾಗಿ ಐಸಿಸಿ ನಿಯಮ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್