ಮುಂಬೈ: ಬಾಲಿವುಡ್ ಬೆಡಗಿ ಅದಾ ಶರ್ಮಾ ಇನ್‍ಸ್ಟಾಗ್ರಾಂನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು, ಇತ್ತೀಚಿಗೆ ತನ್ನ ಅಜ್ಜಿ ಜೊತೆ ಸೊಂಟ ಬಳುಕಿಸುತ್ತಿರುವ ವಿಡಿಯೋವೊಂದನ್ನು ಹಾಕಿದ್ದಾರೆ.
ವಿಡಿಯೋದಲ್ಲಿ ಅದಾ ಜೊತೆಗೆ ಅವರ ಸ್ಪೆಷಲ್ ಪಾರ್ಟ್ ನರ್ ಅಜ್ಜಿ ಕೂಡ ಸೆಪ್ಸ್ ಹಾಕಿದ್ದಾರೆ. ‘ಸೋನು ಕೇ ಟೀಟು ಕಿ ಸ್ವೀಟು’ ಹಾಡಿಗೆ ಅಜ್ಜಿ ಮೊಮ್ಮಗಳು ಈ ಪಾರ್ಟಿ ಹಾಡಿಗೆ ಕುಣಿದಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ಸನ್ನಿ ಸಿಂಗ್ ಹಾಗೂ ಸುಸ್ರತ್ ಬರುಚಾ ಅಭಿನಯಿಸಿದ್ದಾರೆ.
Advertisement
Advertisement
ಅದಾ ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ನಿಮ್ಮ ಡ್ಯಾನ್ಸ್ ಪಾರ್ಟ್ ನರ್ ಗೆ ಟ್ಯಾಗ್ ಮಾಡಿ. ನನ್ನ ಡ್ಯಾನ್ಸ್ ಪಾರ್ಟ್ ನರ್ ನನ್ನ ಅಜ್ಜಿ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಅದಾ ಅವರ ತಾಯಿ ಚಿತ್ರೀಕರಿಸಿದ್ದು, ಒಂದೇ ದಿನದಲ್ಲಿ ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ 13.14 ಲಕ್ಷ ವ್ಯೂ ಗಳಿಸಿದೆ.
Advertisement
ಅದಾ 1920 ಚಿತ್ರಕ್ಕೆ ಬೆಸ್ಟ್ ಫೀಮೇಲ್ ಫಿಲ್ಮಂ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ದಕ್ಷಿಣ ಭಾರತದ ತೆಲುಗು ಹಾಗೂ ಕನ್ನಡದ ಚಿತ್ರದಲ್ಲಿ ನಟಿಸಿದ್ದರು. ನಂತರ ಮತ್ತೆ 2017ರಲ್ಲಿ ‘ಕಮಾಂಡೋ 2’ ಚಿತ್ರದಲ್ಲಿ ವಿದ್ಯತ್ ಜಮ್ಮಾವಲ್ ಜೊತೆ ನಟಿಸಿದ್ದರು. ಇದನ್ನೂ ಓದಿ: ಟವಲ್ ಸುತ್ತಿಕೊಂಡು ಸೆಕ್ಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡ ನಟಿ!
Advertisement