ಮೂರು ವರ್ಷಗಳ ಹಿಂದೆ ಭೀಕರ ಅಪಘಾತದಲ್ಲಿ ಗಾಯಗೊಂಡು ಅರ್ಧ ವರ್ಷ ಆಸ್ಪತ್ರೆಯಲ್ಲೇ ಕಳೆದಿದ್ದ ನಟಿ ಯಶಿಕಾ ಆನಂದ್ (Yashika Anand), ಇದೀಗ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. 2021ರಲ್ಲಿ ನಡೆದ ಅಪಘಾತದಲ್ಲಿ ಅವರು ತೀವ್ರ ಗಾಯಗೊಂಡಿದ್ದರು. ಮತ್ತೆ ಬಣ್ಣದ ಪ್ರಪಂಚಕ್ಕೆ ಬರುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ, ಈಗ ಸಂಪೂರ್ಣ ಗುಣ ಮುಖರಾಗಿದ್ದಾರೆ. ಜೊತೆ ಹೊಸ ಫೋಟೋ ಶೂಟ್ ನಲ್ಲಿ ಪಾಲ್ಗೊಂಡು ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಮಾಡೆಲಿಂಗ್ ಪ್ರಪಂಚದಿಂದ ಬಂದಿರುವ ಯಶಿಕಾ, ಕಾಲಿವುಡ್ ನಲ್ಲಿ ‘ಇರುವಟ್ಟು ಅರಯಿಲ್ ಮುರಟ್ಟು ಕುತ್ತು’ ಎಂಬ ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ನಟಿಸಿದರು. ಅಲ್ಲಿಂದ ಅವರ ವೃತ್ತಿ ಜೀವನವೇ ಬದಲಾಗಿ ಹೋಯಿತು. ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದರಿಂದ ಸಲೀಸಾಗಿ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ನೆರವಾಯಿತು.
ಬಿಗ್ ಬಾಸ್ಮ (Bigg Boss) ನೆಯೊಳಗೆ ಹೋಗುತ್ತಿದ್ದಂತೆಯೇ ಜನರಿಗೆ ಮತ್ತಷ್ಟು ಹತ್ತಿರವಾದ ಯಶಿಕಾ, ಅಲ್ಲಿ ತಮ್ಮ ಜೀವನದಲ್ಲಿ ನಡೆದ ಸಾಕಷ್ಟು ಘಟನೆಗಳನ್ನು ಹಂಚಿಕೊಂಡಿದ್ದರು. ಹಾಗಾಗಿ ಮತ್ತಷ್ಟು ಖ್ಯಾತಿ ಕೂಡ ಅವರ ಬೆನ್ನತ್ತಿ ಬಂತು. ಸಿನಿಮಾಗಳಲ್ಲಿ ನಟಿಸಲು ಆಫರ್ ಕೂಡ ಬಂದವು. ವಯಸ್ಕರ ಕಾಮಿಡಿ ಚಿತ್ರ ಮತ್ತು ಬಿಗ್ ಬಾಸ್ ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟವು.
ಇದೀಗ ಮತ್ತೊಂದು ಕಾರಣಕ್ಕಾಗಿ ಯಶಿಕಾ ಸುದ್ದಿಯಾಗಿದ್ದಾರೆ. ತಮಗಿಂತ 22 ವರ್ಷ ಹಿರಿಯ ನಟನ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಆ ನಟನ ಜೊತೆಗೆ ಕಾರಿನಲ್ಲಿ ಸುತ್ತುವ ಮತ್ತು ಆತನೊಂದಿಗೆ ಕಿಸ್ ಮಾಡಿರುವ ಫೋಟೋಗಳು ವೈರಲ್ ಆಗಿವೆ.
ಕಾಲಿವುಡ್ ಮಾಜಿ ನಟ, ಸೂಪರ್ ಸ್ಟಾರ್ ಅಜಿತ್ ಕುಮಾರ್ (Ajith Kumar) ಅವರ ಬಾಮೈದ ರಿಚರ್ಡ್ ರಿಷಿ (Richard Rishi) ಜೊತೆ ಯಶಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಶಿಕಾ ಜೊತೆಗಿನ ಫೋಟೋಗಳನ್ನು ಸ್ವತಃ ರಿಚರ್ಡ್ ರಿಷಿ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಹಾಗಾಗಿ ವದಂತಿಯು ನಿಜವಿರಬಹುದು ಎಂದು ಹೇಳಲಾಗುತ್ತಿದೆ.
ಕೇವಲ 23ರ ವಯಸ್ಸಿನ ಯಶಿಕಾ ಆನಂದ್, 45 ವರ್ಷದ ರಿಚರ್ಡ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಕಾಲಿವುಡ್ ನ ಗಲ್ಲಿಗಲ್ಲಿಗಳಲ್ಲಿ ಮಾತಾಡಿಕೊಳ್ಳುವಂತಾಗಿದೆ. ಅಲ್ಲದೇ ಇಬ್ಬರೂ ಜೊತೆಗಿರುವ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಕುರಿತು ಸ್ವತಃ ಯಾಶಿಕಾ ಸ್ಪಷ್ಟನೆಯನ್ನು ನೀಡಿದ್ದಾರೆ.
ತಾನು ಯಾವುದೇ ವ್ಯಕ್ತಿಯನ್ನು ಪ್ರೀತಿಸುತ್ತಿಲ್ಲ ಮತ್ತು ಡೇಟ್ ಕೂಡ ಮಾಡುತ್ತಿಲ್ಲ. ಹರಿದಾಡುತ್ತಿರುವ ಫೋಟೋಗಳು ಮುಂದಿನ ಸಿನಿಮಾಗೆ ಸಂಬಂಧಿಸಿದವು ಆಗಿವೆ. ಈ ಸಿನಿಮಾವನ್ನು ವಿನಯ್ ಭಾರದ್ವಾಜ್ ನಿರ್ದೇಶನ ಮಾಡುತ್ತಿದ್ದಾರೆ. ರಿಚರ್ಡ್ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ ಯಶಿಕಾ.
ಸಿಲಾ ನೋಡಿಗಲ್ ಹೆಸರಿನ ತಮಿಳು ಸಿನಿಮಾದಲ್ಲಿ ರಿಚರ್ಡ್ ಕೂಡ ನಟಿಸುತ್ತಿದ್ದಾರಂತೆ. ಆ ಸಿನಿಮಾದ ಫೋಟೋಗಳು ಅವು. ಯಾರೋ ಈ ರೀತಿಯಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಬಾಲ ಕಲಾವಿದರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರಿಚರ್ಡ್ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರನ್ನು ನಾನು ಸದಾ ಗೌರವಿಸುವೆ ಎಂದಿದ್ದಾರೆ ಯಶಿಕಾ.
ಯಶಿಕಾ ಆನಂದ್ ಬೋಲ್ಡ್ (Bold) ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಕಾಸ್ಟ್ಯೂಮ್ ಕೂಡ ಯಾವಾಗಲೂ ಬೋಲ್ಡ್ ಆಗಿಯೇ ಇರುತ್ತವೆ. ಹಾಗಾಗಿ ಆಗಾಗ್ಗೆ ಜನರು ಆಕೆಗೆ ತರ್ಲೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಯಾವುದೇ ಮುಜಗರವಿಲ್ಲದೇ ಯಶಿಕಾ ಕೂಡ ಅಷ್ಟೇ ಬೋಲ್ಡ್ ಆಗಿ ಉತ್ತರ ಕೊಡುತ್ತಿರುತ್ತಾರೆ.