ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇನ್ನೂ ದೊಡ್ಮನೆ ಆಟದಿಂದ ಮೊದಲ ವಾರವೇ ಔಟ್ ಆಗಿದ್ದ ಯಮುನಾ ಶ್ರೀನಿಧಿ ಅವರು ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಹಾಲಿವುಡ್ ನಟಿ
‘ಬಿಗ್ ಬಾಸ್ ಕನ್ನಡ 11’ರ ಬಳಿಕ ಯಮುನಾ (Yamuna Srinidhi) ಅವರು ಮತ್ತೆ ಕಿರುತೆರೆಗೆ ಮರಳಿದ್ದಾರೆ. ‘ಅವನು ಮತ್ತು ಶ್ರಾವಣಿ’ ಸೀರಿಯಲ್‌ಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೌಪರ್ಣಿಕಾ ಪಾತ್ರದಲ್ಲಿ ಖಡಕ್ ಆಗಿ ಯಮುನಾ ನಟಿಸುತ್ತಿದ್ದಾರೆ.
ಇನ್ನೂ ಈ ಹಿಂದೆ ಕಮಲಿ, ಅಶ್ವಿನಿ ನಕ್ಷತ್ರ, ಕನ್ಯಾಕುಮಾರಿ ಸೇರಿದಂತೆ ಸೀರಿಯಲ್‌ಗಳಲ್ಲಿ ಯಮುನಾ ನಟಿಸಿದ್ದಾರೆ. ಸೀರಿಯಲ್ ಅಷ್ಟೇ ಅಲ್ಲ, ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.